Advertisement
ನವೆಂಬರ್‌ನಲ್ಲಿ ಶೇ.5.48ಕ್ಕೆ ಇಳಿದ ಚಿಲ್ಲರೆ ಹಣದುಬ್ಬರಆಹಾರ ಬೆಲೆಗಳಲ್ಲಿ ಇಳಿಕೆಯಾದ ಪರಿಣಾಮ ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.48ಕ್ಕೆ ಇಳಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ಇದರ ಪ್ರಮಾಣ ಶೇ.6.21 ರಷ್ಟಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಹಣದುಬ್ಬರ ಶೇ.5. 55ರಷ್ಟಿತ್ತು. ತರಕಾರಿ, ಧಾನ್ಯಗಳು, ಸಕ್ಕರೆ, ಹಣ್ಣು, ಮೊಟ್ಟೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆಯಾದ ಕಾರಣ ಹಣದುಬ್ಬರ ಇಳಿಕೆ ಕಂಡಿದೆ. ನವೆಂಬರ್‌ನಲ್ಲಿ ಅತಿಹೆಚ್ಚು ಹಣದುಬ್ಬರ ಹೊಂದಿದ್ದ ವಸ್ತುಗಳೆಂದರೆ ಬೆಳ್ಳುಳ್ಳಿ (ಶೇ.85.14), ಆಲೂಗಡ್ಡೆ (66.65), ಹೂ ಕೋಸು (47.7), ಎಲೆಕೋಸು (43.58), ಕೊಬ್ಬರಿ ಎಣ್ಣೆ (42.13).