Advertisement

“ಅಮೆರಿಕ ಮಾದರಿಯಲ್ಲಿ ಚೀನಾ ಉತ್ಪನ್ನ ನಿರ್ಬಂಧಿಸಿ’

11:18 AM Aug 20, 2017 | |

ಬೆಂಗಳೂರು: ಅಮೆರಿಕವು ತನ್ನ ಶತ್ರು ರಾಷ್ಟ್ರಗಳಿಂದ ವಿವಿಧ ಉತ್ಪನ್ನ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿರುವ ಮಾದರಿಯಲ್ಲೇ ಭಾರತವು ಚೀನಾದ ವಸ್ತುಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ ರಾಷ್ಟ್ರೀಯ ಸಹ ಸಂಯೋಜಕ ಪ್ರೊ.ಅಶ್ವಾನಿ ಮಹಾಜನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸ್ವದೇಶಿ ಜಾಗಣ ಮಂಚ್‌ ವತಿಯಿಂದ ಶನಿವಾರ ಜಯನಗರದ ರಾಷ್ಟ್ರೊàತ್ಥಾನ ಶಾರೀರಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಚೀನಾದಿಂದ ಭಾರತಕ್ಕೆ ಏದುರಾಗುತ್ತಿರುವ ಸವಾಲುಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಚೀನಾ ವಸ್ತುಗಳನ್ನು ನಿಷೇಧಿಸುವ ಜತೆಗೆ ದೇಶದೊಳಗೆ ಅಕ್ರಮವಾಗಿ ಬರುತ್ತಿರು ಕೊಲ್ಲಿ ರಾಷ್ಟ್ರಗಳ ಉತ್ಪನ್ನದ ಬಗ್ಗೆಯೂ ಕೇಂದ್ರ ಗುಪ್ರಚಾರ ಇಲಾಖೆ ನಿಗ ವಹಿಸುವಂತಾಗಬೇಕು ಎಂದರು.

ಚೀನಾದಿಂದ ಪ್ರತಿ ನಿತ್ಯ ಭಾರತಕ್ಕೆ ಅಕ್ರಮವಾಗಿ ಬರುವ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಸಂಬಂಧ ವಿದೇಶಾಂಗ ಇಲಾಖೆಯು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ಇದರಲ್ಲಿ ಕೆಲವು ಅಧಿಕಾರಿಗಳು ಶ್ಯಾಮಿಲಾಗಿರುವ ಸಾಧ್ಯತೆ ಇದೆ. ಅಂಥ ಅಧಿಕಾರಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಿಶ್ವ ವ್ಯಾಪಾರ ಒಪ್ಪಂದ ಪ್ರಕಾರ ಚೀನಾ ಕೂಡ ಭಾರತದ ವ್ಯಾಪಾರ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ.

ಚೀನಕ್ಕೆ ತನ್ನ ವಸ್ತುಗಳನ್ನು ಮಾರಾಟ ಮಾಡಿಕೊಳ್ಳಲು ಭಾರತವನ್ನೇ ಅತಿದೊಡ್ಡ ಮಾರುಕಟ್ಟೆ ಮಾಡಿಕೊಂಡಿದೆ. ಚೀನದ ವಸ್ತುಗಳನ್ನು ಬಹಿಷ್ಕಾರ ಮಾಡುವುದರಿಂದ ಚೀನದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲು ಸಾಧ್ಯ ಮತ್ತು ಇದನ್ನು ಜನಾಂದೋಲನದ ರೀತಿಯಲ್ಲಿ ಮಾಡಬೇಕು ಎಂಬ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next