Advertisement

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

12:49 PM Jan 10, 2025 | Team Udayavani |

ಬೆಂಗಳೂರು: ಕರ್ನಾಟಕ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಏಥರ್‌ ಎನರ್ಜಿ ನಾಯಕನಾಗಿ ಹೊರಹೊಮ್ಮಿದ್ದು, 2024ರ ಅಂತ್ಯಕ್ಕೆ ರಾಜ್ಯದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇ.25.7ರಷ್ಟು ಪಾಲು ಗಳಿಸಿದೆ.

Advertisement

2024ರ ಅಂತ್ಯಕ್ಕೆ ಕಂಪನಿಯು 2,279 ಯೂನಿಟ್‌ ಗಳನ್ನು ಮಾರಾಟ ಮಾಡಿದೆ. ದೇಶದ ಅತ್ಯಂತ ಮಹತ್ವದ ಇವಿ ಮಾರುಕಟ್ಟೆಗಳಲ್ಲಿ ಒಂದಾದ ಕರ್ನಾಟಕದಲ್ಲಿ ಪ್ರಾಬಲ್ಯವನ್ನು ಸಾಧಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ರಾಜ್ಯದಲ್ಲಿ ಮಾರಾಟವಾಗುವ 4 ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಲ್ಲಿ ಒಂದು ಏಥರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿದೆ. ಇದು ಸಂಸ್ಥೆಯ ಸಾಧಿಸಿರುವ ಸ್ಥಿರ ಬೆಳವಣಿಗೆಗೆ ಸಾಕ್ಷಿಯಾಗಿದೆ. ದಕ್ಷಿಣ ಭಾರತದಲ್ಲಿ ಸಂಸ್ಥೆಯು 2024ರ ಎರಡನೇ ತ್ರೆ„ಮಾಸಿಕ (ಏಪ್ರಿಲ್‌- ಜೂನ್‌) ಶೇ. 13.6, ಮೂರನೇ ತ್ರೆ„ಮಾಸಿಕ (ಜುಲೈ- ಸೆಪ್ಟೆಂಬರ್‌) ಶೇ.19.5, ನಾಲ್ಕನೇ ತ್ರೆ„ಮಾಸಿಕ (ಅಕ್ಟೋಬರ್‌- ಡಿಸೆಂಬರ್‌) ಶೇ. 21.7 ಮಾರುಕಟ್ಟೆ ಬೆಳವಣಿಗೆ ಪಾಲು ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next