Advertisement

ಜನಪ್ರತಿನಿಧಿಗಳು ಧರ್ಮದಲ್ಲಿ ತಲೆತೂರಿಸಬೇಡಿ: ರಂಭಾಪುರಿ ಶ್ರೀ

09:16 AM Feb 03, 2018 | |

ಹೊನ್ನಾಳಿ: ಜನಪ್ರತಿನಿಧಿಗಳು ಜನೋಪಯೋಗಿ ಕೆಲಸ ಮಾಡಬೇಕೇ ವಿನಃ ಧರ್ಮದಲ್ಲಿ ತಲೆತೂರಿಸಿ ಅನಾವಶ್ಯಕ ಗೊಂದಲ ಸೃಷ್ಟಿಸಬಾರದು ಎಂದು ರಂಭಾಪುರಿ ಶ್ರೀಗಳು ಹೇಳಿದರು. 

Advertisement

ತಾಲೂಕಿನ ರಾಂಪುರ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದಲ್ಲಿ ಲಕ್ಷ ದೀಪೋತ್ಸವ, ಕಳಸಾರೋಹಣ, ಬೃಹನ್ಮಠದ
ನವೀಕರಣ ಶಿಲಾನ್ಯಾಸ ಹಾಗೂ ಶ್ರೀ ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿ ಸ್ಮರಣೋತ್ಸವ, ಸಾಮೂಹಿಕ ವಿವಾಹ, ಹಾಲಸ್ವಾಮೀಜಿ ಮಹಾರಥೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ತನಗೆ ಸಂಬಂಧಿ ಸಿದ ಕೆಲಸ ಮಾಡಿದರೆ ಸಮಾಜದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಪ್ರಸ್ತುತ ತಮಗೆ ಸಂಬಂಧಿಸದ ಕೃತ್ಯಕ್ಕೆ ಕೈ ಹಾಕುವುದು ಹೆಚ್ಚಾಗುತ್ತಿದೆ. ವೀರಶೈವ ಧರ್ಮ ಮನುಕುಲದ ಒಳಿತಿಗಾಗಿ
ಕಾರ್ಯ ಮಾಡುತ್ತಾ ಬಂದಿದ್ದರೂ ಇಂದು ಧರ್ಮವನ್ನು ಒಡೆಯುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಅತ್ತ ಯಾರೂ ಗಮನ ಕೊಡಬಾರದು ಎಂದು ಹೇಳಿದರು.

ರಾಜಕೀಯದಲ್ಲಿ ಧರ್ಮ ಇರಬೇಕು. ಆಗ ಸಮಾಜಕ್ಕೆ ಶ್ರೇಯಸ್ಸು. ಆದರೆ ಇತ್ತೀಚೆಗೆ ಕೆಲವರು ಧರ್ಮದಲ್ಲಿ ರಾಜಕೀಯ ಬೆರೆಸಲು ಹೊರಟಿದ್ದಾರೆ. ಅವರ ಆಸೆ ಈಡೇರದು. ಅದಕ್ಕೆ ಭಕ್ತರು ಅವಕಾಶ ಕೊಡುವುದಿಲ್ಲ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ
ಎಚ್ಚರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next