Advertisement

Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ

11:40 PM Dec 31, 2024 | Team Udayavani |

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಹೊಸ ವರ್ಷದ ಅಂಗವಾಗಿ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ.

Advertisement

ಬೆಂಗಳೂರಿನ ಭಕ್ತರು ನಿರಂತರವಾದ 7ನೇ ವರ್ಷದ ತಮ್ಮ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದ್ದಾರೆ. ಸುಮಾರು 9 ಲಕ್ಷ ರೂ. ವೆಚ್ಚದ ಹೂವುಗಳನ್ನು ಉಪಯೋಗಿಸಿಕೊಂಡು ಸಿಂಗಾರ ಮಾಡಿದ್ದಾರೆ. ತೆಂಗಿನ ಸಿರಿ, ತರಕಾರಿ, ಹಣ್ಣುಗಳು ಮತ್ತು 6 ಬಗೆಯ ಹೂವನ್ನು ಉಪಯೋಗಿಸಿಕೊಂಡು ಶ್ರೀ ದೇಗುಲವನ್ನು ಅಲಂಕೃತಗೊಳಿಸಲಾಗಿದೆ.

ಬೆಂಗಳೂರಿನ ಉದ್ಯಮಿಗಳಾದ ಟಿ.ಎನ್‌.ಮಂಜುನಾಥ್‌, ಉಮೇಶ್‌, ಬಾಲಾಜಿ, ಶರತ್‌ ಬಾಬು ನೇತೃತ್ವದ ತಂಡ ಈ ಸೇವೆ ನೆರವೇರಿಸಿದೆ.

ದೇಗುಲದ ಒಳಾಂಗಣ ಪ್ರವೇಶ ಸ್ಥಳದಲ್ಲಿ ಆಕರ್ಷಕ ದ್ವಾರವನ್ನು ನಿರ್ಮಿಸಿದ್ದಾರೆ. ತೆಂಗಿನ ಸಿರಿ ಮತ್ತು ತೆಂಗಿನ ಗರಿಯನ್ನು ಉಪಯೋಗಿಸಿಕೊಂಡು ಬೃಹತ್‌ ದ್ವಾರವನ್ನು ರಚಿಸಲಾಗಿದೆ. ಸುಬ್ರಹ್ಮಣ್ಯನ ವಾಹನವಾದ ನವಿಲನ್ನು ಸಿರಿ ಮತ್ತು ಗರಿಯಿಂದ ಮಾಡಿ ದ್ವಾರದ ಇಕ್ಕೆಲದಲ್ಲಿ ಇರಿಸಲಾಗಿದೆ. ದ್ವಾರದ ಎದುರು ಅರ್ಧಚಂದ್ರಾಕೃತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಇದರ ಮೇಲೆ ಷಣ್ಮುಖನ ಪುತ್ಥಳಿಯನ್ನು ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next