Advertisement

ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅಭಯ್‌ ಅರ್ಜಿ

10:40 PM Oct 20, 2021 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಮಾಜಿ ಕ್ರಿಕೆಟಿಗ ಅಭಯ್‌ ಶರ್ಮ ಅರ್ಜಿ ಸಲ್ಲಿಸಲಿದ್ದಾರೆ ಎಂಬುದು ಬಿಸಿಸಿಐ ಮೂಲದಿಂದ ಖಚಿತಗೊಂಡಿದೆ.

Advertisement

52 ವರ್ಷದ ಅಭಯ್‌ ಶರ್ಮ ಭಾರತ ಎ, ಅಂಡರ್‌-19 ಹಾಗೂ ಇತ್ತೀಚೆಗೆ ರಾಷ್ಟ್ರೀಯ ವನಿತಾ ತಂಡದೊಂದಿಗೂ ಕರ್ತವ್ಯ ನಿಭಾಯಿಸಿದ್ದರು. 2016ರ ಜಿಂಬಾಬ್ವೆ ಪ್ರವಾಸದ ವೇಳೆ ಹಾಗೂ ಅದೇ ವರ್ಷ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ಗೆ ತೆರಳಿದ ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಕೂಡ ಆಗಿದ್ದರು.

3 ಅಂಡರ್‌-19 ವಿಶ್ವಕಪ್‌, ಭಾರತ “ಎ’ ತಂಡದೊಂದಿಗಿನ 10 ಪ್ರವಾಸಗಳಲ್ಲಿ ಅಭಯ್‌ ಶರ್ಮ ಜತೆಗಿದ್ದರು.ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ರಾಹುಲ್‌ ದ್ರಾವಿಡ್‌ ಜತೆಯೂ ದುಡಿದಿದ್ದರು.

ಇದನ್ನೂ ಓದಿ:ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next