Advertisement

ಕಬಿನಿ ಜಲಾಶಯದಿಂದ ನೀರು ಬಿಡುಗಡೆ ; ಭತ್ತ ಬಿತ್ತನೆ ಕಾರ್ಯ ಚುರುಕು

04:11 PM Aug 11, 2021 | Team Udayavani |

ಯಳಂದೂರು: ತಾಲೂಕಿನಾದ್ಯಂತ ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ 2500 ಹೆಕ್ಟೇರ್‌ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತದೆ.ಈಗಾಗಲೇ ತಾಲೂಕಿನ ಬಹುತೇಕ ಕಡೆ ನಾಲೆಗಳಲ್ಲಿ ಕಬಿನಿ ಜಲಾಶಯದಿಂದ ನೀರನ್ನು ಬಿಡಲಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ 1200 ಕ್ವಿಂಟಲ್‌ ಭತ್ತದ ಬಿತ್ತನೆ
ಬೀಜ ವಿತರಣೆ ಮಾಡಲು ಕ್ರಮ ಕೈಗೊಂಡಿದೆ.

Advertisement

ಕೃಷಿ ಇಲಾಖೆ ಐಆರ್‌ 64, ಆರ್‌ಎನ್‌ಆರ್‌, ಜ್ಯೋತಿ ಸೇರಿದಂತೆ ಇತರೆ ತಳಿಗಳ ಭತ್ತದ ಬೀಜ ನಿಗದಿಪಡಿಸಿದ ಕೇಂದ್ರಗಳಲ್ಲಿ ರೈತರಿಗೆ ಪೂರೈಕೆ ಮಾಡುವ ವ್ಯವಸ್ಥೆ ಮಾಡಿದೆ. ರೈತರು ಈಗಾಗಲೇ ಭತ್ತದ ಬೀಜ ಖರೀದಿಮಾಡಿದ್ದು, ತಮ್ಮ ಜಮೀನುಗಳಲ್ಲಿ ಒಟ್ಲುಪಾತೆ ಮಾಡಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಜಮೀನುಗಳಲ್ಲಿ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿರುವ ದೃಶ್ಯಗಳು ಕಂಡು ಬರುತ್ತಿದೆ. ಜತೆಗೆ ಟಿಲ್ಲರ್‌ ಯಂತ್ರಗಳ ಮೂಲಕ ಹಾಗೂ ಎತ್ತುಗಳ ಮೂಲಕವೂ ಉಳುಮೆ ಮಾಡುತ್ತಿರುವುದು ಸಾಮಾನ್ಯವಾಗಿದೆ.

ರೈತರು ಶ್ರಾಂತಿ ಇಲ್ಲದೇ ದಿನದ ಬಹುಪಾಲು ಹೆಚ್ಚಿನ ಸಮಯವನ್ನು ತಮ್ಮ ಜಮೀನುಗಳಲ್ಲಿ ಕೆಲಸ ಕಾರ್ಯ ಮಾಡುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ರೈತರು ವರ್ಷದಲ್ಲಿ ಎರಡು ಬಾರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ಭತ್ತದ ಬಿತ್ತನೆ ಹಾಗೂ ನಾಟಿ ಸಮಯವಾದರೆ ಮತ್ತೂಂದು ಸುಗ್ಗಿ ವೇಳೆ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಗಾಗಲೇ ರೈತರು ಗದ್ದೆಗಳಲ್ಲಿ ಟಿಲ್ಲರ್‌ಗಳ ಮೂಲಕ ಉಳುಮೆ ಮಾಡಿಸಿ ಜಮೀನನ್ನು ಹದ ಮಾಡಿ ನಾಟಿ ತಯಾರಿಯಲ್ಲಿ ತೊಡಗಿದ್ದರೆ, ಮತ್ತೂಂದೆಡೆ ಕೆಲವು ಜಮೀನುಗಳಲ್ಲಿ ನಾಟಿ ಕಾರ್ಯ ಶುರುವಾಗಿದೆ. ಒಟ್ಟಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿ ಹಾಗಿರುವ ಕಾರಣ ಕಬಿನಿ ನೀರಿನಿಂದ ರೈತರು ಕೃಷಿ
ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಬಿತ್ತನೆ ಕಾರ್ಯದಲ್ಲಿ ಬಿಡುವಿಲ್ಲದೇ ದುಡಿಯುತ್ತಿದ್ದಾರೆ.

ಇದನ್ನೂ ಓದಿ:ಅಫ್ಘಾನಿಸ್ತಾನದ 8ನೇ ನಗರ ತಾಲಿಬಾನ್ ವಶಕ್ಕೆ, ಸೈನಿಕರು, ಪೊಲೀಸರು ಉಗ್ರರಿಗೆ ಶರಣು!

ಕಬ್ಬಿನ ಬಿತ್ತನೆ ಹೆಚ್ಚು: ಕಳೆದ ಎರಡು ವರ್ಷಗಳ ಹಿಂದೆ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಫ‌ಸಲನ್ನು ಬೆಳೆಯುತ್ತಿದ್ದರು. ಕಳೆದ 2 ವರ್ಷದಿಂದ ಭತ್ತ ಪ್ರದೇಶದ ವಿಸ್ತರಣೆಯು ಒಟ್ಟು 2500 ಹೆಕ್ಟೇರ್‌ ಸೀಮಿತಗೊಂಡಿದ್ದು, ಬಹುತೇಕ ರೈತರು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಭತ್ತಕ್ಕೆ ಸರಿಯಾಗಿ ಬೆಂಬಲ ಬೆಲೆ ನೀಡುತ್ತಿಲ್ಲ. ಖರೀದಿ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತೆರೆಯುತ್ತಿಲ್ಲ ಎಂಬುದನ್ನು ಗಮನಿಸಿ ಜನ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ರಸಗೊಬ್ಬರ, ಕೀಟನಾಶಕದ ಕೊರತೆ ಇಲ್ಲ: ತಾಲೂಕಿನಾದ್ಯಂತ ಭತ್ತದ ಬಿತ್ತನೆ ಕಾರ್ಯ ನಡೆಯುತ್ತಿದ್ದು, ರೈತರಿಗೆ ಭತ್ತದ ಬಿತ್ತನೆ ಬೀಜ ಸೇರಿದಂತೆ ರಸಗೊಬ್ಬರ ಹಾಗೂ ಕೀಟನಾಶಕ ಔಷಧ ಕೊರತೆಯಾಗದಂತೆ ಕೃಷಿ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಗೊಬ್ಬರವನ್ನು ಈಗಾಗಲೇ ಖಾಸಗಿ ಅಂಗಡಿ ಸೇರಿದಂತೆ ಇತರೆ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡಲಾಗಿದೆ. ಪ್ರಮುಖವಾಗಿ ಯೂರಿಯಾ, 10,26,26 , ಪೊಟ್ಯಾಷ್‌, ಸೇರಿದಂತೆ ಇತರೆ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಅಲ್ಲದೇ ನಾಟಿ ನಂತರ ಬೆಳೆಗೆ ತಗುಲುವ ರೋಗಗಳ
ಹತೋಟಿಗೆ ಅಗತ್ಯವಾದ ಔಷಧಿ ಇದೆ. ರೈತರು ಯಾವುದೇ ಸಂದರ್ಭದಲ್ಲಿ ಬಂದರೂ ಪೂರೈಕೆ ಮಾಡಲು ಕ್ರಮಕೈಗೊಂಡಿದೆ.

ತಾಲೂಕಿನ ವಿವಿಧೆಡೆ ಭತ್ತದ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಬಿತ್ತನೆ ಬೀಜ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಜತೆಗೆ ರಸಗೊಬ್ಬರ, ಕೀಟನಾಶಕದ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳಲಾಗಿದೆ. ಈ ಬಾರಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ
ನೋಡಿಕೊಳ್ಳಲುಕೃಷಿ ಇಲಾಖೆ ಸಜ್ಜಾಗಿದೆ.
-ವೆಂಕಟರಂಗಶೆಟ್ಟಿ, ಕೃಷಿ ಅಧಿಕಾರಿ

-ಪೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next