Advertisement

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

12:50 AM Dec 23, 2024 | Team Udayavani |

ರೈತ ದಿನಾಚರಣೆ ರೈತರಿಗೆ ಇರುವ ವಿಶೇಷ ದಿನ. ಮನೆ ಮಂದಿ ಎಲ್ಲ ಸೇರಿ, ಊರವರು ಸೇರಿ ಆಚರಿಸುವ ಪರಿಕಲ್ಪ ನೆಯು ಈ ದಿನದ ವಿಶೇಷವಾಗಿದೆ. ಆದರೂ ಇದು ಇತ್ತೀಚಿನ ದಿನಗಳಲ್ಲಿ ಆಡಂಬರದ ದಿನಾಚರಣೆಯಾಗಿ ಪರಿವರ್ತನೆಯಾಗುತ್ತಿರುವುದು ವಿಪ ರ್ಯಾಸ. ಕೆಲವೊಂದು ಗ್ರಾಮ ಪಂಚಾ ಯತ್‌ಗಳಲ್ಲಿ, ಸಹಕಾರಿ ಸಂಘ ಸಂಸ್ಥೆ ಗಳಲ್ಲಿ ಮತ್ತು ಜಿÇÉಾಡಳಿತದಿಂದ ರೈತ ದಿನಾಚರಣೆ ಆಚರಿಸಲ್ಪಡಬೇಕೆಂಬ ಸರಕಾರದ ಆದೇಶ ಇದ್ದರೂ ಕೇವಲ ಕಾಟಚಾರಕ್ಕಾಗಿ ಮಾತ್ರ ಇದನ್ನು ಇತ್ತೀ ಚಿನ ದಿನಗಳಲ್ಲಿ ಮಾಡಲಾಗುತ್ತಿದೆ.

Advertisement

ರೈತರಿಗೆ ಪ್ರೋತ್ಸಾಹ ಕೊಡುವ ನಿಟ್ಟಿ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಹಾಕಿಕೊಂಡಿ ವೆಯಾದರೂ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿಲ್ಲ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಆರೋಗ್ಯ ವಿಮೆ ಯಂತಹ ಯೋಜನೆ ಗಳಿಗೂ ಇನ್ನೂ ಪೂರ್ಣವಾಗಿ ಕೈಗೂ ಡಿಲ್ಲ. ಒಟ್ಟಿನಲ್ಲಿ ರೈತರ ಬಗ್ಗೆ ಕಾಳಜಿಯ ಕೊರತೆ ಎಲ್ಲೆಲ್ಲೂ ಕಾಣುವುದು ಎಲ್ಲರೂ ಒಪ್ಪಬೇಕಾದ ವಿಚಾರ.

ರೈತ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿ ಎನ್ನುವ ಕೂಗು ಇಂದು ನಿನ್ನೆಯ ದಲ್ಲ. ರೈತ ತನ್ನ ಯಾವುದೇ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವ ಹಕ್ಕನ್ನು ಯಾವುದೇ ಸರಕಾರಗಳು ಇವತ್ತಿನವರೆಗೆ ನೀಡದಿರುವುದು ವಿಷಾದನೀಯ. ಇದರಿಂದ ಕೆಲವು ರೈತರು ಕೃಷಿಯಿಂದ ವಿಮುಖ ರಾಗುವ ಜತೆಗೆ ತಮ್ಮ ಮಕ್ಕಳನ್ನು ಕೃಷಿ ಯೇತರ ಚಟುವಟಿಕೆಗೆ ಹೋಗುವ ಒತ್ತಾಯವನ್ನು ಮಾಡುತ್ತಾರೆ.

ಕೃಷಿ ಅಭಿವೃದ್ಧಿಗೆ ಬೆಳೆಗಳ ಇಳುವರಿ ಅಧಿಕಗೊಳಿಸುವುದು ಮಾತ್ರವಲ್ಲದೆ ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಕೂಡ ದೊರಕುವಂತಾಗಬೇಕು. ಈ ಲಾಭದಾಯಕ ಬೆಲೆ ಎಲ್ಲಿಯವರೆಗೆ ದೊರಕುವುದಿಲ್ಲವೋ ಅಲ್ಲಿಯವರೆಗೆ ಕೃಷಿ ಅಭಿವೃದ್ಧಿಯ ಪಥ ಹಿಡಿಯಲು ಸಾಧ್ಯ ವಿಲ್ಲ. ಬೆಲೆ ನಿರ್ಧಾರದ ಹಕ್ಕನ್ನು ರೈತನ ಹೊರತಾಗಿ ಮತ್ತಾವುದೇ ಉತ್ಪಾ ದಕ ವರ್ಗಕ್ಕೆ ಇದುವರೆಗೆ ಕಂಟಕವಾಗಿ ಪರಿಣಾಮ ಬೀರಲಿಲ್ಲ. ಈ ಬಗ್ಗೆ ಎಲ್ಲರೂ ಆಲೋಚಿಸಬೇಕಾದ ಅನಿವಾರ್ಯತೆ ಇದೆ.

ಕನಿಷ್ಠ ಬೆಂಬಲ ಬೆಲೆಯ ಮೂಲ ಉದ್ದೇಶವೇ ವಿಮುಖವಾಗಿ ಯಾವು ದೇ ರೀತಿಯಲ್ಲಿ ರೈತನಿಗೆ ಹೆಚ್ಚಿನ ವಿಚಾರ ದಲ್ಲಿ ಉಪಯೋಗ ಆಗುತ್ತಿ ಲ್ಲವಾದರೂ ಕೆಲವು ರಾಜಕಾರಣಿಗಳು ರೈತನ ಮಕ್ಕಳು ಎಂದು ಹೇಳಿಕೊಳ್ಳುತ್ತಾ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯ ತ್ನವನ್ನು ಮಾತ್ರ ಮಾಡುತ್ತಾರೆ ವಿನಾ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ವಿಫ‌ಲರಾ ಗಿರುವುದು ತಮ್ಮೆಲ್ಲರ ಗಮ ನಕ್ಕೆ ಬಂದ ವಿಚಾರ.

Advertisement

ಇನ್ನಾದರೂ ಸರಕಾರಗಳು ಪಕ್ಷ ಭೇದ ಮರೆತು ಪ್ರಯತ್ನಿಸಿದರೆ ರೈತರಿಗೆ ಅವರಲ್ಲಿರುವ ನಂಬಿಕೆ ಉಳಿಸಲು ಸಾಧ್ಯ. ಕಾಡು ಪ್ರಾಣಿಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದರೂ ರೈತ ಇದನೆಲ್ಲ ಸಹಿಸಿ ಕೊಂಡು ತನ್ನ ಜಾಣ್ಮೆಯಿಂದ ಕೃಷಿ ಮಾಡುತ್ತಿ ರುವುದು ಪ್ರಶಂಸನೀಯ. ಕೆಲವೊಂದು ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಹೊಂದು ವುದರ ಜತೆಗೆ ಮಾನಸಿಕ ನೆಮ್ಮದಿಯನ್ನು ಕಳೆದು ಕೊಂಡು ಬದುಕು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ರೈತನದ್ದಾಗಿದೆ.

ರೈತರು ತಮ್ಮ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದ ಧೃತಿಗೆಡದೆ ಇದು ವರೆಗೂ ಕೃಷಿ ಮುಂದುವರಿಸುವುದು ಪ್ರಶಂಸನೀಯ. ಇದನ್ನು ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ದಿಟ್ಟ ಹೆಜ್ಜೆ ಇಡಬೇಕಾದುದು ಆವಶ್ಯಕ. ರೈತರು ಇಂದು ಎದುರಿಸುತ್ತಿರುವ ಪ್ರಕೃತಿ ವಿಕೋಪ, ಕೀಟ ರೋಗದ ಬಾಧೆ, ಬೆಲೆಯ ಏರಿಳಿತ ಮತ್ತು ವಿಮಾ ಮೊತ್ತ ಪಡೆಯುವಲ್ಲಿನ ಸವಾಲುಗಳು ಕೂಲಿ ಕಾರ್ಮಿಕರ ಸಮಸ್ಯೆ ಇವೆಲ್ಲವೂ ರೈತರ ನಿದ್ದೆ ಕೆಡಿಸಿದೆ. ಇವೆಲ್ಲದಕ್ಕೂ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನ ಕೃಷಿ ಉಳಿಯುವುದು ಅನುಮಾನವೇ ಸರಿ. ತಮ್ಮೆಲ್ಲ ನೋವುಗಳನ್ನು ನುಂಗಿ ಕೊಂಡು ಕೇವಲ ಕೃಷಿ ಉಳಿವಿಗಾಗಿ ಇಟ್ಟಿರುವ ಹೆಜ್ಜೆಗಾಗಿ ಪ್ರತಿಯೊಂದು ರೈತರನ್ನು ಬೆನ್ನು ತಟ್ಟಬೇಕು. ಇದು ರೈತ ದಿನದ ಮೊದಲ ಆದ್ಯತೆಯಾಗಲಿ.
ಆ ಮೂಲಕ ದೇಶದಲ್ಲಿ ಕೃಷಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಶೀಲರಾಗೋಣ.

-ಕುದಿ ಶ್ರೀನಿವಾಸ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next