ಮುದ್ದೇಬಿಹಾಳ: ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸ್ಪಧಿ ìಸಲು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಭಾಗದ ಆಕಾಂಕ್ಷಿತ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಕೆಲವೇ ದಿನಗಳಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಎಪಿಎಂಸಿ ನಿರ್ದೇಶಕರೂ ಆಗಿರುವ ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗುರು ತಾರನಾಳ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಚುನಾವಣೆ ಘೋಷಿಸುವ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿಷ್ಠಾವಂತ, ಹಿರಿಯ ಮತ್ತು ಕಿರಿಯ ಕಾರ್ಯಕರ್ತರ ಅಭಿಪ್ರಾಯ ಕ್ರೋಢೀಕರಿಸಲಾಗುತ್ತಿದೆ.
ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗಿದೆ ಎಂದರು. ಟಿಕೆಟ್ ಹಂಚಿಕೆ ವೇಳೆ ಪಕ್ಷದಲ್ಲಿ ದುಡಿದವರಿಗೆ ಪ್ರಥಮ ಆದ್ಯತೆ ನೀಡಿ ಬಲಿಷ್ಠ ಅಭ್ಯರ್ಥಿಗಳನ್ನು ನಿಲ್ಲಿಸಿ ಅ ಧಿಕಾರ ಹಿಡಿಯಲು ಪ್ರಯತ್ನ ನಡೆಸಲಾಗುತ್ತದೆ. ಮುದ್ದೇಬಿಹಾಳ ಭಾಗದವರು ಮುದ್ದೇಬಿಹಾಳ ಬ್ಲಾಕ್‌ನಲ್ಲಿ, ತಾಳಿಕೋಟೆ ಭಾಗದವರು ತಾಳಿಕೋಟೆ ಬ್ಲಾಕ್‌ನಲ್ಲಿ ಆಗ ನಿಗದಿಪಡಿಸುವ ಡಿಡಿ ಸಮೇತ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಸಕ್ತ ಜಿಪಂ, ತಾಪಂ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿರಲಿದೆ.
ನಾವು ಎಲ್ಲ 11 ತಾಪಂ ಕ್ಷೇತ್ರ ಗೆಲ್ಲುವ ಆತ್ಮ ವಿಶ್ವಾಸ ಹೊಂದಿದ್ದೇವೆ. ರಾಜ್ಯಮಟ್ಟದ ನಾಯಕರು ಇಲ್ಲಿಗೆ ಆಗಮಿಸಿ ನಮ್ಮ ನಾಯಕರಾದ ಮಾಜಿ ಸಚಿವ ಸಿ.ಎಸ್. ನಾಡಗೌಡರ ನೇತೃತ್ವದಲ್ಲಿ ವ್ಯಾಪಕ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದರು. ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ ಮಾತನಾಡಿ, ಚುನಾವಣೆ ಘೋಷಣೆ ಮುನ್ಸೂಚನೆಯಾಗಿ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಹುರಿದುಂಬಿಸಬೇಕಿರುವ ಹಿನ್ನೆಲೆ ಈ ಕರೆ ನೀಡಲಾಗಿದೆ.
ಈಗಾಗಲೇ ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ತೆರಳಿ ಬಿಜೆಪಿಯ ಕೆಟ್ಟ ಆಡಳಿತವನ್ನು ಜನರಿಗೆ ತಿಳಿಸಲು ಮುಂದಾಗಿದ್ದಾರೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಇನ್ನೂ ಹೆಚ್ಚಳವಾಗಲಿದೆ. ಬಿತ್ತುವ ವೇಳೆ ಆದರೂ ಡಿಎಪಿ ಗೊಬ್ಬರ ಸಿಗುತ್ತಿಲ್ಲ. ಆಡಳಿತ ಸರ್ಕಾರದ ವೈಫಲ್ಯವನ್ನು ಜನರ ಗಮನಕ್ಕೆ ತರಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು.
ತಾಳಿಕೋಟೆ ಎಪಿಎಂಸಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಎಪಿಎಂಸಿ ನಿರ್ದೇಶಕ ಬೀರಪ್ಪ ಯರಝರಿ, ಶಾಂತಾರಾಮ ಮೇಲಿನಮನಿ, ಲಕ್ಷ್ಮಣ ಲಮಾಣಿ, ಗ್ರಾಪಂ ಸದಸ್ಯ ಪ್ರಶಾಂತ ತಾರನಾಳ, ಯುವ ಕಾಂಗ್ರೆಸ್ ಸದಸ್ಯರು ಇದ್ದರು.