ಹೈದರಾಬಾದ್: ಪ್ಲೇ ಆಫ್ ಸ್ಥಾನಕ್ಕೆ ತೀವ್ರ ಸ್ಪರ್ಧೆ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ಚಾಲೆಂಜ್ ಗೆ ಸಿದ್ದವಾಗಿದೆ. ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.
12 ಪಂದ್ಯಗಳಿಂದ 12 ಅಂಕ ಸಂಪಾದಿಸಿರುವ ಆರ್ ಸಿಬಿ ಪ್ಲೇ ಆಫ್ ರೇಸ್ ನಲ್ಲಿದೆ. ಉಳಿದೆರಡು ಪಂದ್ಯ ಗೆದ್ದು ಉತ್ತಮ ರನ್ ರೇಟ್ ನೊಂದಿಗೆ ಮುಂದಿನ ಹಂತಕ್ಕೆ ತಲುಪುವ ಯೋಜನೆಯಲ್ಲಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡವು ಕೂಟದಿಂದ ಹೊರಬಿದ್ದಿದೆ. ಪ್ರತಿಷ್ಠೆಗಾಗಿ ಕೊನೆಯ ಎರಡು ಪಂದ್ಯವಾಡುತ್ತಿದೆ. ಇತರ ಪಂದ್ಯಗಳ ಪ್ಲೇ ಆಫ್ ಕನಸನ್ನು ನುಚ್ಚು ನೂರು ಮಾಡಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಅನುಜ್ ರಾವತ್ (ವಿ.ಕೀ), ಶಹಬಾಜ್ ಅಹ್ಮದ್, ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾ), ಹೆನ್ರಿಚ್ ಕ್ಲಾಸೆನ್ (ವಿ.ಕೀ), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ