ಹೈದರಾಬಾದ್: ಸಹನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾ ಪ್ರಭಾವಿ, ತೆಲುಗು ನಟನೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರಸಾದ್ ಬೆಹರಾ (Prasad Behara) ಬಂಧಿತ ನಟ.
ಏನಿದು ಘಟನೆ:
ಸಂತ್ರಸ್ತೆ ಯುವತಿ ಪ್ರಸಾದ್ ಜತೆ ʼಪೆಳ್ಳಿವರಮಂಡಿʼ ಎನ್ನುವ ಶೋನಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಸಮಯದಲ್ಲಿ ಪ್ರಸಾದ್ ನಟಿಯ ಜೊತೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾರೆ. ನಟನ ಈ ವರ್ತನೆಯಿಂದ ಬೇಸತ್ತ ಸಹ ನಟಿ ಕಾರ್ಯಕ್ರಮದಿಂದ ಹೊರಬರಲು ನಿರ್ಧರಿಸಿದ್ದಾರೆ. ಆದರೆ ತನ್ನ ತಪ್ಪಿನ ಅರಿವಾಗಿ ಪ್ರಸಾದ್ ನಟಿಯ ಬಳಿ ಕ್ಷಮೆಯಾಚಿಸಿ ಶೋ ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ.
ಇದಾದ ಬಳಿಕ ನಟಿಯ ಜತೆ ಪ್ರಸಾದ್ ʼಮೆಕ್ಯಾನಿಕ್ʼ ಎಂಬ ಇನ್ನೊಂದು ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವಾಗ ಪ್ರಸಾದ್ ಮತ್ತೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದಲ್ಲದೆ ನಟಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದಾನೆ. ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಡಿ.11 ರಂದು ನಟಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಆಕೆಯ ಮೇಲೆ ಪ್ರಸಾದ್ ಹಲ್ಲೆ ನಡೆಸಿದ್ದಾನೆ.
ಪರಿಣಾಮ ಬೇರೆ ದಾರಿ ಕಾಣದೆ ನಟಿ ಪ್ರಸಾದ್ ವಿರುದ್ದ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಸಾದ್ನನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದ್ಯ ಈ ಬಗ್ಗೆ ʼಮೆಕ್ಯಾನಿಕ್ʼ ತಂಡದಿಂದ ಯಾವುದೇ ಹೇಳಿಕೆ ಇದುವರೆಗೆ ಬಂದಿಲ್ಲ.