ಇದು, ಅತ್ಯಾಚಾರ ಪ್ರಕರಣದಲ್ಲಿ ಆಜೀವ ಕಾರಾಗೃಹ ಶಿಕ್ಷೆಗೆ ಗುರಿ ಯಾಗಿರುವ ಸ್ವಘೋ ಷಿತ ಧರ್ಮಗುರು ಅಸಾರಾಮ್, ಹಿಂದೊ ಮ್ಮೆ ತನ್ನ ಕಾಮಲೀಲೆ ಗಳನ್ನು ಪ್ರಶ್ನಿಸಿದ್ದ ತನ್ನ ಭಕ್ತ ರಾಹುಲ್ ಕೆ. ಸಚಾರ್ ಎಂಬುವರ ಮುಂದೆ ಉದುರಿಸಿದ ನುಡಿಮುತ್ತು!
Advertisement
ಬುಧವಾರ, ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವ ಮುನ್ನ, ನಡೆದ ಕೊನೇ ಹಂತದ ವಿಚಾರಣೆಯಲ್ಲಿ ಅಸಾರಾಮ್ ವಿರುದ್ಧ ಸಾಕ್ಷ್ಯ ನುಡಿದ ರಾಹುಲ್, ಪುಷ್ಕರ್ (ರಾಜಸ್ಥಾನ), ಭಿವಾನಿ (ಹರ್ಯಾಣ), ಅಹ್ಮದಾಬಾದ್‌ನಲ್ಲಿನ (ಗುಜರಾತ್) ಆಶ್ರಮಗಳಲ್ಲಿ ಸದಾ ಮೂವರು ಬಾಲಕಿಯರೊಂದಿಗೆ ಸುತ್ತು ಹಾಕುತ್ತಿದ್ದ ಅಸಾರಾಮ್, ತನ್ನ “ಟಾರ್ಗೆಟ್ ಬಾಲಕಿ’ಯನ್ನು ಆಯ್ದುಕೊಳ್ಳುತ್ತಿದ್ದ. ರಾತ್ರಿಯಾಗುತ್ತಲೇ, ತನ್ನಲ್ಲಿದ್ದ ಟಾರ್ಚ್‌ನ ಬೆಳಕನ್ನು ಮೂರು ಬಾರಿ ತನ್ನ ಮೂವರು ಪರಿಚಾರಕಿಯರ ಕಡೆ ಬಿಟ್ಟು “ಟಾರ್ಗೆಟ್ ಬಾಲಕಿ’ಯನ್ನು ತನ್ನ ಕುಟೀರಕ್ಕೆ ಕರೆತರಲು ಸೂಚಿಸುತ್ತಿದ್ದ. ಅಲ್ಲದೆ, ನಿತ್ಯವೂ ಕಾಮೋದ್ರೇಕ ಮಾತ್ರೆಗಳನ್ನು ನುಂಗುತ್ತಿದ್ದ ಎಂದಿದ್ದಾರೆ.