Advertisement

ಬಿಜೆಪಿಯ ಮೂವರಿಂದ ಅನ್ಯಾಯ : ದಿಲ್ಲಿಯಲ್ಲಿ ರಮೇಶ ಜಾರಕಿಹೊಳಿ ಹೇಳಿಕೆ

06:45 AM Jun 30, 2021 | Team Udayavani |

ಬೆಂಗಳೂರು : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ದಿಢೀರ್‌ ದಿಲ್ಲಿಗೆ ತೆರಳಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಸುಳಿವು ನೀಡಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಾರಕಿಹೊಳಿ, ಬಿಜೆಪಿಯ ಮೂವರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ತಮಗೆ ಅನ್ಯಾಯ ಮಾಡಿದ್ದು, ತಕ್ಕ ಪಾಠ ಕಲಿಸುತ್ತೇನೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಸೋಮವಾರ ರಾತ್ರಿ 2 ಗಂಟೆಗೆ ದಿಲ್ಲಿಯಿಂದ ಕರೆ ಬಂದಿತ್ತು. ಅವರ ಆಹ್ವಾನದ ಮೇರೆಗೆ ನಾನು ಬಂದಿದ್ದೇನೆ. ಯಾರನ್ನು ಭೇಟಿಯಾಗುತ್ತೇನೆ ಎಂದು ಬಳಿಕ ತಿಳಿಸುತ್ತೇನೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರಿಂದ ತನಗೆ ಅನ್ಯಾಯ ಆಗಿಲ್ಲ ಎಂದೂ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ದಿಲ್ಲಿಯಲ್ಲಿದ್ದು, ರಮೇಶ್‌ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಲ್ಲದ ಕೂಡ ದಿಲ್ಲಿಗೆ
ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕೂಡ ದಿಲ್ಲಿಗೆ ತೆರಳಿದ್ದಾರೆ. ಆದರೆ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಿದರೂ ಗುಪ್ತವಾಗಿರಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಹೋದರರ “ಪ್ಲ್ರಾನ್‌ ಬಿ’?
ಸಂಪುಟ ಸೇರಲು ಸಾಧ್ಯವಾಗದಿದ್ದರೆ ರಮೇಶ್‌ ಜಾರಕಿಹೊಳಿ “ಪ್ಲ್ರಾನ್‌ ಬಿ’ಯೊಂದನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. ಸಿ.ಡಿ. ಆರೋಪ ಎದುರಿಸುತ್ತಿರುವುದರಿಂದ ಸಂಪುಟ ಸೇರ್ಪಡೆಗೆ ವರಿಷ್ಠರು ಅನುಮತಿ ನೀಡುವುದು ಅನುಮಾನ. ಹೀಗಾಗಿ ಸಹೋದರ ಬಾಲಚಂದ್ರ ಅವರನ್ನು ಸಂಪುಟಕ್ಕೆ ಸೇರಿಸಲು ರಮೇಶ್‌ ಚಿಂತನೆ ನಡೆಸಿದ್ದು, ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ರಮೇಶ್‌ ವಹಿಸುವ ಸಾಧ್ಯತೆ ಇದೆ.

Advertisement

ಯತ್ನಾಳ-ಯೋಗೇಶ್ವರ ಚರ್ಚೆ
ವಿಜಯಪುರ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದಲ್ಲಿ ಮಂಗಳವಾರ ರಹಸ್ಯ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಯೋಗೇಶ್ವರ ಅವರು ಅಥಣಿ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಯತ್ನಾಳ ಅವರನ್ನು ಭೇಟಿಯಾಗಿ ಸುಮಾರು ಅರ್ಧ ತಾಸು ರಹಸ್ಯ ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next