Advertisement

Local Body Election: ಪರಾಭವಗೊಂಡ ಅಭ್ಯರ್ಥಿಗಳ ಜತೆ ಜ.10ಕ್ಕೆ ಬಿ.ವೈ.ವಿಜಯೇಂದ್ರ ಸಭೆ

01:55 AM Jan 07, 2025 | Team Udayavani |

ಬೆಂಗಳೂರು: ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳೊಂದಿಗೆ ಜ. 10ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಅವರ ಜತೆಗೆ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪರಾಜಿತ ಶಾಸಕರ ಜತೆಗೆ ಇಷ್ಟು ದೊಡ್ಡಮಟ್ಟದ ಸಭೆ ಆಯೋಜನೆ ಮಾಡಲಾಗಿದೆ.

Advertisement

ಸದ್ಯದಲ್ಲೇ ಎದುರಾಗುವ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ ಸಿದ್ಧತೆ ದೃಷ್ಟಿಯಿಂದ ಪರಾಜಿತ ಅಭ್ಯರ್ಥಿಗಳ ಜತೆಗೆ ಈ ಸಭೆ ಆಯೋಜಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಬಿಜೆಪಿಯ ಸದ್ಯದ ಬಲಾಬಲ ಅರಿತುಕೊಳ್ಳುವ ಜತೆಗೆ ಯಾವ ರೀತಿ ತಂತ್ರಗಾರಿಕೆ ನಡೆಸಬೇಕೆಂಬ ಉದ್ದೇಶವನ್ನು ಈ ಸಭೆ ಹೊಂದಿದೆ.

ಜಿ.ಪಂ., ತಾ.ಪಂ. ಕಾರ್ಯಕರ್ತರ ಚುನಾವಣೆ. ಕಾರ್ಯಕರ್ತರು ಗೆದ್ದರಷ್ಟೇ ಪಕ್ಷಕ್ಕೆ ಬಲ ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಕೆ ಮಾಡಲು ಪಕ್ಷದ ಪ್ರಯತ್ನ ಹೇಗಿರಬೇಕೆಂಬುದನ್ನು ನಿರ್ಧರಿಸಲು ಸಭೆ ಕರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next