Advertisement

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

10:58 PM Jan 03, 2025 | Team Udayavani |

ಬಳ್ಳಾರಿ: ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದ ಬೆನ್ನಲ್ಲೇ ವಕ್ಫ್ ವಿರುದ್ಧ ಮತ್ತೊಂದು ಸಮರ ಸಾರಿರುವ ಬಸವನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ನೇತೃತ್ವದ ತಂಡ ಜ. 4ರಂದು ಕಂಪ್ಲಿ ಪಟ್ಟಣದಲ್ಲಿ “ವಕ್ಫ್ ಹಠಾವೋ ದೇಶ್‌ ಬಚಾವೊ’ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಿದೆ.

Advertisement

ಶನಿವಾರ ಮಧ್ಯಾಹ್ನ 3ಕ್ಕೆ ಕಂಪ್ಲಿ ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪಾದಯಾತ್ರೆ ನಡೆಯಲಿದ್ದು, ಬಳಿಕ ಪಟ್ಟಣದ ಸಣಾಪುರ ರಸ್ತೆಯಲ್ಲಿನ ಶಾರದಾ ಶಾಲಾ ಆವರಣದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಸಭೆಯಲ್ಲಿ ವಕ್ಫ್ ಸಂಬಂಧಿ ತ ಸಮಸ್ಯೆಗಳು ಆಲಿಸಿ, ದಾಖಲೆ ಸಮೇತ ದೂರುಗಳನ್ನು ಸ್ವೀಕರಿಸಲಾಗುವುದು. ಜನಜಾಗೃತಿ ಸಭೆಯಲ್ಲಿ ಶಾಸಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಅವರೊಂದಿಗೆ ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌, ಮಾಜಿ ಸಂಸದರಾದ ಬಿ.ವಿ.ನಾಯಕ್‌, ಪ್ರತಾಪ್‌ ಸಿಂಹ, ಚಂದ್ರಪ್ಪ, ಬಿ.ಪಿ.ಹರೀಶ್‌, ರವಿ ಬಿರಾದಾರ್‌, ಜೆಡಿಎಸ್‌ ಮುಖಂಡ ಎನ್‌.ಆರ್‌.ಸಂತೋಷ್‌ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಅಭಿಯಾನ ಸಮಿತಿಯ ಸಂಚಾಲಕ ಭರತ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿ ವಕ್ಫ್ ನೋಟಿಸ್‌ ನೀಡಿದ್ದ ಹೊಲಗಳು ಹಾಗೂ ದೇವಸ್ಥಾನಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದರು. ಇದಾದ ಬಳಿಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಲ್ಕು ತಂಡಗಳಾಗಿ ರಾಜ್ಯದ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹಿಸಿ ಸರಕಾರದ ವಿರುದ್ಧ ಹೋರಾಟ ನಡೆಸಿದ್ದರು.

ಯಾಕೆ ಪ್ರತಿಭಟನೆ?
– ರೈತರು, ಮಠಗಳು ಮತ್ತು ಸರಕಾರಿ ಜಾಗಗಳ ಪಹಣಿಯಲ್ಲಿ ವಕ್ಫ್ ಹೆಸರು
– ವಕ್ಫ್ ಮಂಡಳಿಯ ನೋಟಿಸ್‌ ವಿರೋಧಿಸಿ ಯತ್ನಾಳ್‌ ಟೀಂನಿಂದ ಪ್ರತಿಭಟನೆ
– ಈ ಮೊದಲು ಬೀದರ್‌, ಕಲಬುರಗಿ ಸೇರಿ 6 ಜಿಲ್ಲೆಗಳಲ್ಲಿ ಜನಜಾಗೃತಿ ಸಭೆ
– ಮಾಹಿತಿ ಸಂಗ್ರಹಿಸಿ ವಕ್ಫ್ ಜೆಪಿಸಿಗೆ ಒದಗಿಸಿದ್ದ ತಂಡ

Advertisement

Udayavani is now on Telegram. Click here to join our channel and stay updated with the latest news.

Next