ಬೆಂಗಳೂರು: ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಬಿಜೆಪಿ ಮುಖಂಡ, ಸೋಮಶೇಖರ್ ಜಯರಾಮ್ ಅಲಿಯಾಸ್ ಜಿಮ್ ಸೋಮನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ ಫ್ಲ್ಯಾಟ್‌ಗೆ ಕರೆದೊಯ್ದ ಸೋಮ, ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ
ಎಂದು 26 ವರ್ಷದ ಸಂತ್ರಸ್ತೆ ಆರೋಪಿಸಿದ್ದಾರೆ. ಸಂತ್ರಸ್ತೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು.
ಕಳೆದ ವರ್ಷ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್ ಬಳಿ ಸುಮಾರು 6 ಲಕ್ಷ ರೂ. ಸಹಾಯ ಕೇಳಿದ್ದರು. ಹೀಗಾಗಿ ಆರೋಪಿ 2024ರ ಅಕ್ಟೋಬರ್‌ನಲ್ಲಿ ದೂರುದಾರಳ ಪಿಜಿ ಬಳಿ ಹೋಗಿದ್ದ ಸೋಮಶೇಖರ್, ಆಕೆಯನ್ನು ತನ್ನ ಫ್ಲ್ಯಾಟ್‌ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.