Advertisement
ವೋಲ್ವೋ ಸೇರಿ ಪ್ರತಿಷ್ಠಿತ (ಸುವಿಹಾರಿ) ಸೇವೆಗಳಿಗೆ ದರ ಪರಿಷ್ಕರಣೆ ಅನ್ವಯವಾಗುವುದಿಲ್ಲ. ಇದು ನಿಗಮದ ಮಟ್ಟದಲ್ಲೇ ಕಾಲಕಾಲಕ್ಕೆ ನಿರ್ಣಯ ಆಗಲಿದೆ. ಈ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾನ್ಯ ಬಸ್ ದರಗಳ ಏರಿಕೆ ಹೊರತಾಗಿಯೂ ಹವಾನಿಯಂತ್ರಿತ ವಜ್ರ, ವಾಯುವಜ್ರ ಬಸ್ಗಳ ಯಾನ ದರಗಳನ್ನು ಏರಿಸಲಾಗಿದೆ.
Related Articles
Advertisement
ಪ್ರತಿಷ್ಠಿತ ಬಸ್ಗಳಿಗೆ ದರ ಏರಿಕೆ ಅನ್ವಯಿಸುವುದಿಲ್ಲಜಿಎಸ್ಟಿ (ಸರಕು ಸೇವಾ ತೆರಿಗೆ) ಹವಾನಿಯಂತ್ರಿತ (ಎಸಿ) ಬಸ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಜತೆಗೆ ಪ್ರತಿಷ್ಠಿತ ಬಸ್ಗಳ ಪ್ರಯಾ ಣ ದರ ಏರಿಕೆಯು ನಿಗಮದ ಮಟ್ಟದಲ್ಲೇ ಕಾಲ ಕಾಲಕ್ಕೆ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಆ ಹಿನ್ನೆಲೆಯಲ್ಲಿ ಈಗ ಏರಿಕೆ ಮಾಡಲಾಗಿರುವ ಟಿಕೆಟ್ ದರವು ಅವುಗಳಿಗೆ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಸರಕಾರಿ ಬಸ್ಗಳ ಟಿಕೆಟ್ ದರವನ್ನು ಹೋಲಿಸಿದಲ್ಲಿ ಕರ್ನಾಟಕದಲ್ಲಿ ಸಾರಿಗೆ ಬಸ್ದ ಕಡಿಮೆಯಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣ ದರ ಏರಿಕೆ: ಎಲ್ಲಿಗೆ ಎಷ್ಟು?
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರದ ಘಟಕಗಳಿಗೆ ತೆರಳುವ ಕೆಎಸ್ಸಾರ್ಟಿಸಿ ವೇಗದೂತ ಬಸ್ ಪ್ರಯಾಣದ ದರ ಪಟ್ಟಿ ಈ ಕೆಳಕಂಡಂತಿದೆ. ಊರು – ಹಿಂದಿನ ಪ್ರಯಾಣ ದರ – ಪರಿಷ್ಕೃತ ಪ್ರಯಾಣ ದರ
ತುಮಕೂರು 80 91 ಮಂಗಳೂರು 398 454 ಉಡುಪಿ 452 516 ಪುತ್ತೂರು 401 457 ಮಡಿಕೇರಿ 265 313 ಶಿವಮೊಗ್ಗ 312 356 ಕಾರವಾರ 614 699 ಮಂಡ್ಯ 116 131 ಹಾಸನ 217 246 ಚಿಕ್ಕಬಳ್ಳಾಪುರ 72 81 ದಾವಣಗೆರೆ 320 362 ಮೈಸೂರು 141 162 ಚಿಕ್ಕಮಗಳೂರು 284 323 ಚಿತ್ರದುರ್ಗ 242 274 ರಾಮನಗರ 45 52 ಚಾಮರಾಜನಗರ 179 206 ಕೋಲಾರ 74 85 ಕಲಬುರಗಿ 706 805 ಬೀದರ್ 821 936 ರಾಯಚೂರು 560 638 ಯಾದಗಿರಿ 662 755 ಬಳ್ಳಾರಿ 374 424 ಹೊಸಪೇಟೆ 402 455 ಕೊಪ್ಪಳ 447 506 ವಿಜಯಪುರ 691 779 ಬೆಳಗಾವಿ 617 697 ಚಿಕ್ಕೋಡಿ 708 801 ಬಾಗಲಕೋಟೆ 605 685 ಧಾರವಾಡ 523 591 ಹುಬ್ಬಳ್ಳಿ 499 563 ಶಿರಸಿ 455 520 ಗದಗ 525 593 ಹಾವೇರಿ 420 474 ಬಿಜೆಪಿ ಟೀಕೆ:
ಪರ ರಾಜ್ಯಗಳ ಚುನಾವಣೆ ಖರ್ಚಿಗಾಗಿ ಕನ್ನಡಿಗರ ಜೇಬಿಗೆ ಕನ್ನ ಹಾಕುವ ಸಂಪ್ರದಾಯವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ!! ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಸುಳ್ಳು ಹೇಳಿ ಈಗ ಏಕಾಏಕಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿರುವುದು ಸಹ ಮುಂಬರುವ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ನ ಪಾರ್ಟಿ ಫಂಡ್ಗೆ!! ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಇನ್ನೆಷ್ಟು ತೊಂದರೆ ನೀಡುವಿರಿ..??!! ಎಂದು ಬಿಜೆಪಿ ಟೀಕಿಸಿದೆ.