Advertisement

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

12:07 PM Nov 03, 2015 | mahesh |

ಅಬುಧಾಬಿ : ಸೋಮವಾರದ ಐಪಿಎಲ್ ನ 37 ನೇ ಪಂದ್ಯದಲ್ಲಿ ಚೆನ್ನೈ ನೀಡಿದ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟಿಗೆ ಕೇವಲ 125 ರನ್‌ ಗಳಿಸಿತ್ತು. ನ್ನೈ ತಂಡದ ಬ್ಯಾಟಿಂಗ್‌ ನಿರ್ಧಾರವನ್ನು ವೇಗಿ ಜೋಫ್ರ ಆರ್ಚರ್‌ ತಲೆ ಕೆಳಗಾಗಿಸಿದರು. ಮೊದಲ 2 ಓವರ್‌ಗಳಲ್ಲಿ ಕೇವಲ 5 ರನ್‌ ನೀಡಿದ ಅವರು ಫಾ ಡು ಪ್ಲೆಸಿಸ್‌ (10) ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಶೇನ್‌ ವಾಟ್ಸನ್‌ (8) ಕೂಡ ಕ್ರೀಸ್‌ ಆಕ್ರಮಸಿಕೊಳ್ಳಲು ವಿಫ‌ಲರಾದರು. ಪವರ್‌ ಪ್ಲೇ ಅವಧಿಯಲ್ಲಿ ಎರಡು ದೊಡ್ಡ ವಿಕೆಟ್‌ ಕಳೆದುಕೊಂಡ ಧೋನಿ ಪಡೆ ಸಂಕಟಕ್ಕೆ ಸಿಲುಕಿತು.

Advertisement

Udayavani is now on Telegram. Click here to join our channel and stay updated with the latest news.

Next