ಹೈದರಾಬಾದ್: ಬಹುನಿರೀಕ್ಷಿತ ‘RRR’ ಚಿತ್ರದ ಬಿಡುಗಡೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಮುಂದಿನ ವರ್ಷ ಭರ್ಜರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ಬಿಡುಗಡೆಯ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಣೆಯಾಗಿದೆ. ಈ ಸಿನಿಮಾ ಮುಂದಿನ ವರ್ಷ (2022) ಜನವರಿ 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಜ್ಯೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ‘RRR’ ಚಿತ್ರದ ಬಿಡುಗಡೆಗೆ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಬಹು ತಾರಾಗಣದ RRR ಚಿತ್ರದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ರಾಯ್ ಸ್ಟೀವನ್ ಸನ್, ಶ್ರೀಯಾ ಸರನ್, ಛತ್ರಪತಿ ಶೇಖರ್, ಸೇರಿದಂತೆ ಮೊದಲಾದ ಕಲಾವಿದರು ನಟಿಸಿದ್ದರು. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಡಿವಿವಿ ದಾನಯ್ಯ ತಮ್ಮ ಡಿವಿವಿ ಎಂಟರ್ ಟೇನ್ ಮೆಂಟ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಇದೀಗ ಶೂಟಿಂಗ್ ಮುಕ್ತಾಯವಾಗಿದ್ದು, ಮುಂದಿನ ವರ್ಷ ಭರ್ಜರಿಯಾಗಿಯೇ ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ.