Advertisement

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

03:33 PM Dec 26, 2024 | Team Udayavani |

ಮುಂಬಯಿ: ಬಾಲಿವುಡ್‌ನ ಸೂಪರ್‌ ಫ್ರ್ಯಾಂಚೈಸ್ ʼ ಕ್ರಿಶ್ʼ ಚಿತ್ರದ ನಾಲ್ಕನೇ ಭಾಗದ ಕುರಿತು ಅಪ್ಡೇಟ್‌ವೊಂದು ಹೊರಬಿದ್ದಿದೆ.

Advertisement

ಹೃತಿಕ್‌ ರೋಷನ್‌ (Hrithik Roshan) ಸದ್ಯ ಬಹು ನಿರೀಕ್ಷಿತ ʼವಾರ್‌ -2ʼ (War 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ʼಕ್ರಿಶ್‌ -4ʼ (Krrish 4) ಚಿತ್ರದ ಕುರಿತು ಅಪ್ಡೇಟ್‌ವೊಂದು ಹೊರಬಿದ್ದಿದೆ.

ಸೂಪರ್‌ ಫ್ರ್ಯಾಂಚೈಸ್ ನ ʼಕ್ರಿಶ್‌ʼ ಇದುವರೆಗೆ ಮೂರು ಪಾರ್ಟ್‌ಗಳು ಬಂದಿವೆ. 2013 ರಲ್ಲಿ ʼಕ್ರಿಶ್‌ -3ʼ ತೆರೆಕಂಡಿತ್ತು. ʼಕ್ರಿಶ್‌ -4ʼ ಬಗ್ಗೆ ಕಳೆದ ಕೆಲ ವರ್ಷಗಳಿಂದ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.

ʼವಾರ್ 2ʼ ಚಿತ್ರದ ಚಿತ್ರೀಕರಣ ಏಪ್ರಿಲ್‌ 2025ರ ವೇಳೆಗೆ ಮುಕ್ತಾಯಗೊಳಿಸಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ನಿರ್ದೇಶಕ ಅಯಾನ್ ಮುಖರ್ಜಿ ಅವರು ಕೊನೆಯ ಶೆಡ್ಯೂಲ್‌ನಲ್ಲಿ ಕೆಲವು ಪ್ರಮುಖ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ ಎನ್ನಲಾಗಿದೆ. ಏಪ್ರಿಲ್ ಶೆಡ್ಯೂಲ್‌ ಸಂಪೂರ್ಣವಾಗಿ ಫೈಟ್ಸ್ ಮತ್ತು ಸ್ಟಂಟ್‌ಗಳಿಗೆ ಮೀಸಲಾಗಿರುತ್ತದೆ ಎಂದು ಚಿತ್ರತಂಡ ಹೇಳಿದೆ.

Advertisement

ʼವಾರ್‌ -2ʼ ಚಿತ್ರದ ಶೂಟ್‌ ಬಳಿಕ ʼಕ್ರಿಶ್‌ -4ʼ ಸೆಟ್ಟೇರಲಿದೆ. ಇದರ ಚಿತ್ರೀಕರಣ ಮುಂಬೈ ಹಾಗೂ  ಯುರೋಪಿನ ಕೆಲವು ಭಾಗಗಳಲ್ಲಿ ನಡೆಯಲಿದೆ ಎಂದು ʼಮಿಡ್‌ ಡೇʼ ವರದಿ ಮಾಡಿದೆ.

ಈ ಹಿಂದೆ ಹೃತಿಕ್‌ ರೋಷನ್‌ ಜತೆ ʼಅಗ್ನಿಪಥ್ʼ ಸಿನಿಮಾವನ್ನು ಮಾಡಿದ್ದ ನಿರ್ದೇಶಕ ಕರಣ್ ಮಲ್ಹೋತ್ರಾ ಅವರು  ʼಕ್ರಿಶ್‌ -4ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಕೆಲ ವರ್ಷಗಳಿಂದ ಸಿನಿಮಾದ ಸ್ಕ್ರಿಪ್ಟ್‌ ಕೆಲಸ ಜಾರಿಯಲ್ಲಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಹೃತಿಕ್‌ ರೋಷನ್‌ ಅವರ ತಂದೆ ರಾಕೇಶ್‌ ರೋಷನ್‌  ಸಂದರ್ಶನವೊಂದರಲ್ಲಿ, ನಾನು ಸದ್ಯಕ್ಕೆ ನಾನು ನಿರ್ದೇಶನ ಮಾಡುವುದಿಲ್ಲ. ಶೀಘ್ರದಲ್ಲೇ ʼಕ್ರಿಶ್‌ -4ʼ ಅನೌನ್ಸ್‌ ಮಾಡಲಿದ್ದೇನೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next