Advertisement

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

11:44 AM Dec 28, 2024 | Team Udayavani |

ಲಾಸ್‌ ಏಂಜಲೀಸ್(Los Angeles): 1970ರಲ್ಲಿ ಹಾಲಿವುಡ್‌ ನಲ್ಲಿ ತೆರೆಕಂಡಿದ್ದ ಜಾನ್‌ ವೇಯ್ನೆ ಅವರ‌ ಚಿಸಮ್‌ ಸಿನಿಮಾದಲ್ಲಿ ಬಿಲ್ಲಿ ದಿ ಕಿಡ್‌ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟ ಜೆಫ್ರಿ ಡ್ಯೂಯೆಲ್‌ (81 ವರ್ಷ-Geoffery Deuel) ನಿಧನರಾಗಿರುವುದಾಗಿ ವರದಿ ತಿಳಿಸಿದೆ.

Advertisement

ಹಾಲಿವುಡ್‌ ರಿಪೋರ್ಟರ್‌ ಪ್ರಕಾರ, ಜೆಫ್ರಿ ಡ್ಯೂಯೆಲ್‌ ಅವರು ಫ್ಲೋರಿಡಾದ ಲಾರ್ಗೋದಲ್ಲಿನ ಹೋಸ್ಪಿಸ್‌ ಕೇರ್‌ ನಲ್ಲಿ ಡಿಸೆಂಬರ್‌ 22ರಂದು ಕೊನೆಯುಸಿರೆಳೆದಿದ್ದರು ಎಂದು ವರದಿ ವಿವರಿಸಿದೆ.

ನಟ ಜೆಫ್ರಿ ಅವರು ದೀರ್ಘಕಾಲದಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ಡಿ.22ರಂದು ವಿಧಿವಶರಾಗಿರುವುದಾಗಿ ಪತ್ನಿ ಜಾಕ್ವೆಲಿನ್‌ ಡ್ಯೂಯೆಲ್‌ ತಿಳಿಸಿದ್ದಾರೆ.

1960-70ರ ದಶಕದಲ್ಲಿ ಅಮೆರಿಕದ ಜನಪ್ರಿಯ ಟಿ.ವಿ. ಶೋಗಳಲ್ಲಿ ಡ್ಯುಯೆಲ್‌ ಪಾತ್ರ ನಿರ್ವಹಿಸಿದ್ದರು. ಅಂದಿನ ದಿ ಮಂಕೀಸ್‌, ದಿ ಇನ್‌ ವೇಡರ್ಸ್‌, ದಿ ಎಫ್‌ ಬಿಐ, ದಿ ಫ್ಲೈಯಿಂಗ್‌ ನನ್‌, ಮೆಡಿಕಲ್‌ ಸೆಂಟರ್‌, ಮ್ಯಾನಿಕ್ಸ್‌ ಸೇರಿದಂತೆ ಹಲವು ಟೆಲಿವಿಷನ್‌ ಶೋಗಳಲ್ಲಿ ನಟಿಸಿದ್ದರು.

Advertisement

1970ರಲ್ಲಿ ತೆರೆಕಂಡಿದ್ದ ಚಿಸಮ್‌, ಟರ್ಮಿನಲ್‌ ಐಲ್ಯಾಂಡ್‌, ದಿ ಚೈನೀಸ್‌ ಕ್ಯಾಪರ್‌ ಸಿನಿಮಾಗಳಲ್ಲಿ ಜೆಫ್ರಿ ಡ್ಯುಯೆಲ್‌ ಅಭಿನಯಿಸಿದ್ದರು. ಅಲ್ಲದೇ 1973ರಿಂದ 1977ರವರೆಗೆ ಪ್ರಸಾರವಾಗಿದ್ದ ದಿ ಯಂಗ್‌ & ದಿ ರೆಸ್ಟ್‌ ಲೆಸ್‌ ಟೆಲಿವಿಷನ್‌ ಸರಣಿಯಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು.

ಜೆಫ್ರಿ ಜಾಕಬ್‌ ಡ್ಯುಯೆಲ್‌ ನ್ಯೂಯಾರ್ಕ್‌ ನ ಲಾಕ್‌ ಪೋರ್ಟ್‌ ನಲ್ಲಿ 1943ರ ಜನವರಿ 17ರಂದು ಜನಿಸಿದ್ದರು. ಡ್ಯುಯೆಲ್‌ ತಂದೆ ಎಲ್ಸ್‌ ವರ್ಥ್‌ ವೈದ್ಯರಾಗಿದ್ದು, ತಾಯಿ ನರ್ಸ್‌ ಆಗಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next