Advertisement

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

10:33 AM Jan 01, 2025 | Team Udayavani |

ಮುಂಬಯಿ: ಖ್ಯಾತ ನಟ ರಾಮ್ ಕಪೂರ್ ಇತ್ತೀಚೆಗೆ ತಮ್ಮ ನಂಬಲಸಾಧ್ಯ ಎನ್ನುವ ರೀತಿ ತೂಕ ಕಳೆದುಕೊಂಡು ತಾನು ರೂಪಾಂತರ ಹೊಂದಿರುವುದನ್ನು ಬಹಿರಂಗಪಡಿಸಿ ಅಭಿಮಾನಿಗಳನ್ನು ಆಶ್ಚರ್ಯ ಚಕಿತರನ್ನಾಗಿಸಿದ್ದಾರೆ. ಕೇವಲ 18 ತಿಂಗಳಲ್ಲಿ ಮಾತ್ರೆ, ಶಸ್ತ್ರ ಚಿಕಿತ್ಸೆ ಅವಲಂಬಿಸದೆ ಬರೋಬ್ಬರಿ 55 ಕೆ.ಜಿ. ತೂಕ ಕಳೆದುಕೊಂಡು ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ಮಾಧ್ಯಮ ಸಂದರ್ಶನದಲ್ಲಿ ಈ ವಿಚಾರವನ್ನು ಕಪೂರ್ ಬಹಿರಂಗಪಡಿಸಿದ್ದು, ”ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೆ, ಸ್ಥಿರವಾದ ವ್ಯಾಯಾಮ ಮತ್ತು ಸಮತೋಲಿತ ಆಹಾರದೊಂದಿಗೆ ಶಿಸ್ತುಬದ್ಧ ಜೀವನಶೈಲಿಯ ಮೇಲೆ ಕೇಂದ್ರೀಕರಿಸಿ ಬದಲಾವಣೆ ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಕಪೂರ್ “ಹಾಯ್ ಗಯ್ಸ್ , ಇನ್‌ಸ್ಟಾದಿಂದ ಸ್ವಲ್ಪ ಸಮಯದವರೆಗೆ ದೂರವಿದ್ದುದಕ್ಕಾಗಿ ಕ್ಷಮಿಸಿ. ನಾನು ನನ್ನ ಬಗ್ಗೆ ಸಾಕಷ್ಟು ಆಳವಾಗಿ ಕೆಲಸ ಮಾಡುತ್ತಿದ್ದೆ” ಎಂದು ಹೇಳಿಕೊಂಡಿದ್ದಾರೆ.

51 ರ ಹರೆಯದ ರಾಮ್ ಕಪೂರ್ ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಖ್ಯಾತಿ ಪಡೆದವರು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟರಲ್ಲಿ ಒಬ್ಬರು. ಕಸಮ್ ಸೆ , ಬಡೆ ಅಚ್ಛೇ ಲಗತೆ ಹೇ ಮೂಲಕ ಮನೆ ಮಾತಾದ ನಟ.

Advertisement

ತೂಕವನ್ನು ಏಕಾಏಕಿ ಕಳೆದುಕೊಳ್ಳುವುದನ್ನು ಅಪಾಯಕಾರಿ, ತೀವ್ರವಾದ ಆಹಾರಗಳು, ಔಷಧಿಗಳು ಅಥವಾ ಶಸ್ತ್ರಚಿಕಿತ್ಸಾ ವಿಧಾನ ಕೂಡ ಅಪಾಯಕಾರಿ ಕೆಲಸ ಎಂದು ಹೇಳಲಾಗಿದೆ. ಆದಾಗ್ಯೂ, ಆಹಾರ, ವ್ಯಾಯಾಮ ಮತ್ತು ನಿದ್ರೆಯನ್ನು ಒಳಗೊಂಡಿರುವ ಜೀವನಶೈಲಿಯ ಬದಲಾವಣೆಗಳ ಮೂಲಕ ಸಮರ್ಥನೀಯ ತೂಕ ನಷ್ಟವನ್ನು ಸಾಧಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸತತವಾಗಿ ಒತ್ತಿಹೇಳುತ್ತಾರೆ.

ಸಮತೋಲಿತ ವಿಧಾನವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳುವಲ್ಲಿ ಸಹಾಯ ಮಾಡಿ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next