Advertisement
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಹೇಳಿಕೆಯನ್ನು ನೀಡಿದ ಸೋನು ಸೂದ್ ನನಗೆ ಪ್ರಭಾವಿ ರಾಜಕಾರಣಿಗಳು ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದರು ಆದರೆ ನಾನು ಅದನ್ನು ನಿರಾಕರಿಸಿದ್ದೆ, ಬಳಿಕ ಉಪ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದರು ಆದರೆ ನಾನು ಅದನ್ನೂ ನಿರಾಕರಿಸಿದೆ ಕೊನೆಗೆ ರಾಜ್ಯಸಭಾ ಸದಸ್ಯತ್ವವನ್ನು ನೀಡುವ ಭರವಸೆ ನೀಡಿದರೂ ಆದರೆ ಇದನ್ನೂ ನಯವಾಗಿಯೇ ತಿರಸ್ಕರಿಸಿದ ಸೂದ್ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತಾ ಸೋನು ಸೂದ್ ಜನರು ಎರಡು ಕಾರಣಗಳಿಗಾಗಿ ರಾಜಕೀಯಕ್ಕೆ ಬರುತ್ತಾರೆ, ಒಂದು ಹಣ ಗಳಿಸುವ ಉದ್ದೇಶದಿಂದ ಇನ್ನೊಂದು ಅಧಿಕಾರಕ್ಕಾಗಿ ಆದರೆ ನನಗೆ ಇವೆರಡರಲ್ಲೂ ಆಸಕ್ತಿ ಇಲ್ಲ. ಜನರಿಗೆ ಸಹಾಯ ಮಾಡುವುದಿದ್ದರೆ ರಾಜಕೀಯಕ್ಕೆ ಬಂದೇ ಸಹಾಯ ಮಾಡಬೇಕೆಂದಿಲ್ಲ ಆದರೆ ನಾನು ಈಗಾಗಲೇ ಹಲವು ರೀತಿಯಲ್ಲಿ ಜನರಿಗೆ ಸಹಾಯ ಮಾಡಿದ್ದೇನೆ ಜೊತೆಗೆ ನನಗೆ ಸಹಾಯ ಮಾಡಲು ವ್ಯಕ್ತಿಯ ಜಾತಿ, ಭಾಷೆ, ಧರ್ಮದ ಅಗತ್ಯವಿಲ್ಲ ಎಂದು ಹೇಳಿದರು. ರಾಜಕೀಯಕ್ಕೆ ಪ್ರವೇಶ ಮಾಡಿದರೆ ನಾನು ನನ್ನ ಸ್ವಾತಂತ್ರ್ಯ ಕಳೆದುಕೊಳ್ಳುವ ಭಯ ನನಗಿದೆ ಹಾಗಾಗಿ ನನಗೆ ರಾಜಕೀಯ ಸೇರುವ ಅಸೆ ಇಲ್ಲ ಹಾಗಂತ ನಾನು ರಾಜಕೀಯ ವಿರೋಧಿ ಅಲ್ಲ, ರಾಜಕಾರಣಿಗಳನ್ನು ನಾನು ಗೌರವದಿಂದಲೇ ಕಾಣುತ್ತೇನೆ, ಜನರ ಸೇವೆ ಮಾಡುವ ಅವಕಾಶ ತುಂಬಾ ಇದೆ ಅದನ್ನು ನಾನು ಮಾಡುತ್ತಲೇ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ.
Related Articles
Advertisement