Advertisement

ಗಾಯದ ಮೇಲೆ ಬರೆ ಎಳೆದ ಮಳೆ; ಫ‌ಸಲು ನಾಶ

07:13 PM Oct 13, 2021 | Team Udayavani |

ಕಾರ್ಕಳ: ಚಂಡಮಾರುತ ಪರಿಣಾಮ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನೂರಾರು ಎಕರೆ ಭತ್ತದ ಕೃಷಿಗೆ ಹಾನಿಯಾಗಿದೆ. ಇದ ರಿಂದಾಗಿ ಕೃಷಿಕರು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಮಂಗಳವಾದ ಸುರಿದ ಮಳೆಗೆ ಕಣಂಜಾರು ಗ್ರಾಮದ ಕೃಷ್ಣ ಶೆಟ್ಟಿ ಅವರ ಹೊಲದಲ್ಲಿನ ಭತ್ತದ ಪೈರುಗಳಿಗೆ ಹಾನಿಯಾಗಿ ಸುಮಾರು 30 ಸಾವಿರ ರೂ.ಯಷ್ಟು ನಷ್ಟ ಸಂಭವಿಸಿದೆ. ಇನ್ನು ಅಜೆಕಾರು, ಇರ್ವತ್ತೂರು, ಸಾಣೂರು, ಕುಕ್ಕುಂದೂರು, ಬಜಗೋಳಿ, ರೆಂಜಾಳ, ಮಿಯ್ಯಾರು, ನಕ್ರೆ, ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ಕಡೆಗಳಲ್ಲೂ ಇದೇ ಸ್ಥಿತಿ ಉಂಟಾಗಿದ್ದು ಅಪಾರ ನಷ್ಟವುಂಟಾಗಿದೆ.

ಆರು ತಿಂಗಳು ಮಳೆ, ಮೂರು ತಿಂಗಳು ಬಿಸಿಲು ಇದು ಅನಾದಿ ಕಾಲದ ಲೆಕ್ಕಾಚಾರ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಾಲವೂ ಮಳೆಗಾಲ ಎನ್ನುವಂತಾಗಿದೆ.

ಕಳೆದ ಜೂನ್‌ನಿಂದ ಇಲ್ಲಿ ತನಕ ಪ್ರತೀ ತಿಂಗಳು ಒಂದಲ್ಲ ಒಂದು ಭೂ ಪ್ರದೇಶದಲ್ಲಿ ಮಳೆಯಾಗುತ್ತಲೇ ಇತ್ತು. ಹವಾಮಾನ ವೈಪರೀತ್ಯ, ವಾಯುಭಾರ ಕುಸಿತದ ಕಾರಣ ಅಕಾಲಿಕ ಮಳೆಯಾಗುತ್ತಿದ್ದು, ಈ ಮೊದಲೇ ಕೋವಿಡ್‌, ಲಾಕ್‌ಡೌನ್‌, ಕಾಡು ಪ್ರಾಣಿಗಳ ಹಾವಳಿ, ಕೃಷಿಗೆ ರೋಗ ಬಾಧೆ ಇನ್ನಿತರ ಕಾರಣಗಳಿಂದ ಕೃಷಿಕರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಇದೀಗ ಮಳೆಯ ತಾಪತ್ರಯದಿಂದ ಇದ್ದ ಕೃಷಿಯೂ ಮಳೆಗೆ ಆಹುತಿಯಾಗಿದ್ದು ಕೃಷಿಕರ ಸ್ಥಿತಿ ಗಾಯದ ಮೇಲೆ ಬರೆ ಎಳೆದ ಸ್ಥಿತಿಯಂತಾಗಿದೆ.

ಇದನ್ನೂ ಓದಿ:ಟಿ.20 ವಿಶ್ವಕಪ್: ಅಕ್ಷರ್ ಪಟೇಲ್ ಜಾಗಕ್ಕೆ ಶಾರ್ದೂಲ್ ಠಾಕೂರ್

Advertisement

ರಸ್ತೆಗೆ ಹಾನಿ
ಅಕಾಲಿಕ ಮಳೆಯಿಂದ ತಾಲೂಕಿನ ಜನಜೀವನ ಕೂಡ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ಹರಿದು ಸಮಸ್ಯೆಯಾಗಿತ್ತು. ಹೆದ್ದಾರಿ ಹಾಗೂ ಒಳ ರಸ್ತೆಗಳ ಅಲ್ಲಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಗುಡ್ಡ ಪ್ರದೇಶದಿಂದ ಕಲ್ಲು ಮಣ್ಣು ಮಿಶ್ರಿತ ನೀರು ರಸ್ತೆಗೆ ಹರಿದು ಬಂದು ಸಂಚಾರದಲ್ಲಿ ಅಲ್ಲಲ್ಲಿ ವ್ಯತ್ಯಯಗೊಂಡಿತ್ತು. ಕಾಂತಾವರ ಬಳಿ ರಸ್ತೆ ಗುಡ್ಡದ ಮಣ್ಣು ಕೊಚ್ಚಿ ಕೊಂಡು ಬಂದು ಸಮಸ್ಯೆ ಸೃಷ್ಟಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next