Advertisement
ತಾಲೂಕಿಗೆ ಒಳಪಡುವ ಜಿಲ್ಲೆಯ ಅತಿ ದೊಡ್ಡ ಗ್ರಾಮಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು,ವಡಕೆಹಳ್ಳ, ಕೌದಳ್ಳಿ, ಎಲ್ಲೇಮಾಳ, ಕುರಟ್ಟಿ ಹೊಸೂರು, ಮಹಾಲಿಂಗನಕಟ್ಟೆ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇನ್ನು ಈ ಭಾಗದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು 800-1000 ಅಡಿ ಆಳ ಕೊರೆದರೂ ನೀರು ದೊರಕುತ್ತಿಲ್ಲ. ಈ ಭಾಗದ ಜನರು ಕುಡಿಯುವ ನೀರು ಮತ್ತು ದೈನಂದಿನಬಳಕೆಗಾಗಿ ಗ್ರಾಮ ಸಮೀಪದ ಅಥವಾ ಹೊರವಲಯದ ಜಮೀನುಗಳಿಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿಯಿದೆ.
Related Articles
Advertisement
2ನೇ ಹಂತದ ಯೋಜನೆ ಜಾರಿಗೊಳಿಸಿ: ತಾಲೂಕಿನ 100 ಗ್ರಾಮಗಳಿಗೆ ಮೊದಲ ಹಂತದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಯೋಜನೆ ಜಾರಿಯಾಗದ ಗ್ರಾಮಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆ 2ನೇ ಹಂತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡು ಶೀಘ್ರ ನೀರಿನ ಬವಣೆಯನ್ನು ತಪ್ಪಿಸಬೇಕುಎಂಬುದುಸಾರ್ವಜನಿಕರ ಒತ್ತಾಯವಾಗಿದೆ.
ದಾನಿಗಳು ಸಹಕಾರ: ತಾಲೂಕಿನ ಗ್ರಾಮಗಳಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳಿಂದ ಅಥವಾ ಜನ ಪ್ರತಿನಿಧಿಗಳಿಂದ ಪರಿಹಾರ ದೊರಕದ ಹಿನ್ನೆಲೆ ಜನಾಶ್ರಯ ಟ್ರಸ್ಟ್ ಅಥವಾ ಮಾನಸ ಸೇವಾ ಫೌಂಡೇಷನ್‌ನ ಸಹಾಯ ಪಡೆದು ಕುಡಿಯುವ ನೀರಿನ ಸಮಸ್ಯೆ ನೀಗಿಸಿಕೊಳ್ಳುತ್ತಿದ್ದಾರೆ.
ತಾಲೂಕಿನ ಸಮರ್ಪಕ ಮಳೆಯಾಗದೆಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಮತ್ತು ಕೃಷಿ ಚಟುವಟಿಕೆ ಕುಂಠಿತವಾಗಿರುವ ಬಗ್ಗೆ ಉಸ್ತುವಾರಿ ಸಚಿವ ಸೋಮಶೇಖರ್ ಗಮನಕ್ಕೆ ತರಲಾಗಿದೆ. ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಜಿಲ್ಲಾಧಿಕಾರಿಗೆಮನವಿ ಮಾಡಲಾಗಿದೆ. ಸಾಧ್ಯವಾದಷ್ಟು ಕಡೆ ನೀರಿನ ಸಮಸ್ಯೆ ನಿವಾರಿಸಲು ಕ್ರಮವಹಿಸಲಾಗಿದೆ.
-ಆರ್. ನರೇಂದ್ರ, ಶಾಸಕ -ವಿನೋದ್ ಎನ್.ಗೌಡ