Advertisement

Rain ಕರಾವಳಿಯಲ್ಲಿ ಮಳೆ ಸಾಧ್ಯತೆ; ಆ. 26ರಂದು ಆರೆಂಜ್‌ ಅಲರ್ಟ್‌

12:31 AM Aug 26, 2024 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ ಆ. 26ರಂದು ಆರೆಂಜ್‌ ಅಲರ್ಟ್‌, ಆ. 27 ಮತ್ತು 28ರಂದು ಎಲ್ಲೋ ಅಲರ್ಟ್‌ ಮತ್ತು ಆ. 29ರಂದು ಮತ್ತೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

Advertisement

ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ. ಮಂಗಳೂರಿನಲ್ಲಿ 28.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ.ಸೆ. ಕಡಿಮೆ ಮತ್ತು 24.3 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.4 ಡಿ.ಸೆ. ಏರಿಕೆ ಕಂಡಿತ್ತು.

ಉಡುಪಿಯಲ್ಲಿ ಸಾಧಾರಣ ಮಳೆ
ಉಡುಪಿ: ಜಿಲ್ಲೆಯಲ್ಲಿ ರವಿವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಉಡುಪಿ, ಕುಂದಾಪುರ, ಬೈಂದೂರು, ಹೆಬ್ರಿ, ಕಾಪು, ಬ್ರಹ್ಮಾವರ, ಕಾರ್ಕಳ ಭಾಗದ ಅಲ್ಲಲ್ಲಿ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಸಣ್ಣದಾಗಿ ಮಳೆಯಾಗಿದೆ. ತಡರಾತ್ರಿ ಮತ್ತು ಹಗಲು ಮಣಿಪಾಲ, ಮಲ್ಪೆ ಸುತ್ತಮುತ್ತ ಹನಿಹನಿ ಮಳೆ ಸುರಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next