Advertisement
ಉದ್ಘಾಟನ ಕಾರ್ಯಕ್ರಮದ ಬಳಿಕ ಎರಡು ದಿನ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ತಣ್ಣೀರುಬಾವಿ ಬೀಚ್ನಲ್ಲಿ ಡಿ. 28, 29ರಂದು ಬೀಚ್ ಉತ್ಸವ ನಡೆಯಲಿದೆ.
‘ವಿಶ್ವ ಗ್ರಾಮ’ (ಗ್ಲೋಬಲ್ ವಿಲೆಜ್) ಪರಿಕಲ್ಪನೆಯಡಿ ರೂಪುಗೊಳ್ಳಲಿರುವ ಈ ಬಾರಿಯ ವಸ್ತುಪ್ರದರ್ಶನವು ಕರಾವಳಿಯ ನೈಜ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ವಿವಿಧ ಜನಾಂಗದ ರೀತಿ ರಿವಾಜುಗಳನ್ನು ಪರಿಚಯಿಸಲು ವ್ಯವಸ್ಥೆಯನ್ನು ಮಾಡಲಾ ಗುತ್ತಿದ್ದು ಕೈಮಗ್ಗ, ಕುಂಬಾರಿಕೆ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಇನ್ನಿತರ ಕೌಶಲಗಳ ಅನಾವರಣವಾಗಲಿದೆ. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳು ಕೂಡ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಸ್ತು ಪ್ರದರ್ಶನದಲ್ಲಿ ಒಟ್ಟು 60 ಮಳಿಗೆಗಳಿರಲಿವೆ. ಜತೆಗೆ ಅಮ್ಯೂಸ್ಮೆಂಟ್ ಪಾರ್ಕ್ ಇರ ಲಿದೆ. ಕರಾವಳಿಯ ವೈವಿಧ್ಯಮಯ ಖಾದ್ಯ ಗಳ ತಯಾರಿಕೆ, ಪ್ರದರ್ಶನ, ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದೆ.
Related Articles
Advertisement
ಇಂದು ಆಕರ್ಷಕ ಮೆರವಣಿಗೆಕರಾವಳಿ ಉತ್ಸವದ ಉದ್ಘಾಟನೆ ಪ್ರಯುಕ್ತ ಶನಿವಾರ ಸಂಜೆ 4ಕ್ಕೆ ಕೊಡಿಯಾಲಬೈಲಿನ ಕೆನರಾ ಕಾಲೇಜಿ ನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ, ವೈವಿಧ್ಯಮಯ ಸಾಂಪ್ರದಾಯಿಕ ವೇಷ ಭೂಷಣ ಗಳೊಂದಿಗೆ ಕಲಾವಿದರ ತಂಡಗಳು ಮೆರವ ಣಿಗೆಯಲ್ಲಿ ಭಾಗವಹಿಸಲಿವೆ. ಬಳಿಕ ಉದ್ಘಾಟನೆ ನಡೆಯಲಿದೆ. ರೊಬೊಟಿಕ್ ಬಟರ್ಫ್ಲೈ ಪ್ರದರ್ಶನ
ಕದ್ರಿ ಪಾರ್ಕ್ನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ನಡೆಯಲಿದೆ. ಡಿ. 22ರ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ಪ್ರತಿದಿನ ಈ ಪ್ರದರ್ಶನವಿರುತ್ತದೆ.
ಕರಾವಳಿ ಉತ್ಸವವನ್ನು ಈ ಬಾರಿ ರಮಣೀಯವಾಗಿಸಲು ಹೆಲಿಕಾಪ್ಟರ್ನಲ್ಲಿ ಕರಾವಳಿ ಸೊಬಗು ಸವಿಯುವ ವ್ಯವಸ್ಥೆ ಮಾಡಲಾಗಿದೆ. ಡಿ. 21ರಿಂದ 29ರ ವರೆಗೆ ನಗರದ ಮೇರಿಹಿಲ್ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಪ್ರಯಾಣ ಪ್ರಾರಂಭವಾಗಲಿದೆ. ಸಾರ್ವಜನಿಕರು ನಗರ ದರ್ಶನ ಹಾಗೂ ಕಡಲ ಕಿನಾರೆಯ ಸೌಂದರ್ಯ ಸವಿಯಲು ಸಿದ್ಧತೆ ಮಾಡಲಾಗಿದೆ. ಹೆಲಿಕಾಪ್ಟರ್ ಪ್ರಯಾಣದ ಪ್ರತೀಟ್ರಿಪ್ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದೆ. www.helitaxii.com ಸಂಪರ್ಕಿಸಬಹುದು. ಅಪೂರ್ವ ಉತ್ಸವ
ಹಲವು ವರ್ಷಗಳ ಬಳಿಕ ನಡೆಯಲಿರುವ ಕರಾವಳಿ ಉತ್ಸವದ ಕಾರ್ಯಕ್ರಮಗಳಲ್ಲಿ ಕರಾವಳಿಯ ನೈಜ ಸಂಸ್ಕೃತಿ ಸಾಹಿತ್ಯ, ಉಡುಗೆ ತೊಡುಗೆಗಳು ಹಾಗೂ ಸಾಂಪ್ರದಾಯಿಕ ತಿಂಡಿ ತಿನಸುಗಳ ಪ್ರದರ್ಶನ ಮತ್ತು ಮಾರಾಟದ ಅಪೂರ್ವ ಕಾರ್ಯಕ್ರಮ ನಡೆಯಲಿದೆ.
– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ