Advertisement

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

01:24 PM Dec 21, 2024 | Team Udayavani |

ಮೇರಿಹಿಲ್: ಕರಾವಳಿಯ ಸೊಬಗವನ್ನು ಎತ್ತರಿಂದ ಆಹ್ಲಾದಿಸಬೇಕು ಎಂಬ ಉದ್ದೇಶಕ್ಕೆ ಕರಾವಳಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಹೆಲಿಕಾಪ್ಟರ್ ಪ್ರಯಾಣ ವ್ಯವಸ್ಥೆಗೆ ಶನಿವಾರ (ಡಿ.21) ಬೆಳಗ್ಗೆ ಚಾಲನೆ ದೊರೆಯಿತು.

Advertisement

ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಜಿಲ್ಲಾಡಳಿತದ ಸಹಕಾರದೊಂದಿಗೆ ಕರಾವಳಿ ಉತ್ಸವ ನಡೆಯುತ್ತಿದ್ದು, ಮೊದಲ ಬಾರಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ದೊರಕಿದೆ ಎಂದರು.

ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮಾತನಾಡಿ, ಕರಾವಳಿ ಉತ್ಸವದ ಪ್ರಯುಕ್ತ ‘ಕುಡ್ಲ ಹೈ’ ಎಂಬ ಮಂಗಳೂರು ನಗರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಡ್ಲದ ಸುಂದರತೆಯನ್ನು ಹೆಲಿಕಾಫ್ಟರ್‌ನಲ್ಲಿ ನೋಡುವುದು ಸುಂದರ. ಇದರೊಂದಿಗೆ ನಗರದ ಪ್ರಕೃತಿ, ನದಿ, ಸಮುದ್ರದ ಜೊತೆಗೆ ಅಭಿವೃದ್ಧಿಯ ದರ್ಶನವಾಗುತ್ತದೆ. ಪ್ರವಾಸೋದ್ಯಮದ ದೂರದೃಷ್ಟಿಯಿಂದ ಈ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ಹೇಳಿದರು.

ಡಿ.29 ರವರೆಗೆ ಅವಕಾಶ
ಡಿ.21ರಿಂದ 29 ರವರೆಗೆ ನಗರದ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಪ್ರಯಾಣ ನಡೆಯಲಿದೆ. ಸಾರ್ವಜನಿಕರು ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಸವಿಯಲು ಅವಕಾಶ ಇದೆ. ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‌ನಲ್ಲಿ ೬ ಜನರಿಗೆ ಸಂಚರಿಸಲು ಅವಕಾಶವಿದೆ. ಹೆಲಿಕಾಫ್ಟರ್‌ನಲ್ಲಿ ಸಂಚರಿಸಲು ಆಸಕ್ತರು ಬುಕ್ಕಿಂಗ್‌ಗಾಗಿ ವೆಬ್‌ಸೈಟ್ //www.helitaxii.com ಸಂಪರ್ಕಿಸಬಹುದು.

Advertisement

ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ಉಪ ಜಿಲ್ಲಾಕಾರಿ ಡಾ| ಸಂತೋಷ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಸಹಿತ ಮತ್ತಿತರರು ಇದ್ದರು.

ಇದನ್ನೂ ಓದಿ: iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next