Advertisement

“ರಗಡ್‌’ಗಾಗಿ ರಗಡ್ ಲುಕ್

02:28 PM Mar 23, 2018 | |

ವಿನೋದ್ ಪ್ರಭಾಕರ್ ಅವರ ತಂದೆ ಟೈಗರ್ ಪ್ರಭಾಕರ್ ಅವರಿಗೆ “ಮಿಸ್ಟರ್ ಮೈಸೂರ್’ ಆಗುವ ಆಸೆ ಇತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ವಿನೋದ್ ತಮ್ಮ ತಂದೆಯ ಆಸೆಯನ್ನು ಪೂರೈಸುವುದಕ್ಕೆ ಹೆಜ್ಜೆ ಇಟ್ಟಿದ್ದಾರೆ.

Advertisement

“ಮಿಸ್ಟರ್ ಮೈಸೂರು’ ಅಲ್ಲದಿದ್ದರೂ, ಬಾಡಿಬಿಲ್‌ಡ್‌ ಮಾಡಿ ವಿಜಯನಗರದಲ್ಲಿ ಮೇ ತಿಂಗಳಲ್ಲಿ ನಡೆಯುವ ಸ್ಪರ್ಧೆಗೆ ಗೆಸ್ಟ್ ಪೋಸ್ ಕೊಡೋಕ್ಕಾದರೂ ಹೋಗುವುದಕ್ಕೆ ತೀರ್ಮಾನಿಸಿದ್ದಾರೆ. ಇದೆಲ್ಲವೂ ಶುರುವಾಗಿದ್ದು ವಿನೋದ್ ಅಭಿನಯದ “ರಗಡ್’ ಚಿತ್ರದಿಂದ. ಆ ಚಿತ್ರದಲ್ಲಿನ ಒಂದು ದೃಶ್ಯಕ್ಕೆ ಏಯ್ಟ್ ಪ್ಯಾಕ್‌ನ ಅವಶ್ಯಕತೆ ಇತ್ತಂತೆ.

ಅದಕ್ಕಾಗಿ ವರ್ಕೌಟ್ ಮಾಡುತ್ತಾ ಮಾಡುತ್ತಾ ಈಗ ಏಯ್ಟ್ ಪ್ಯಾಕ್ ಮಾಡಿ ಸ್ಪರ್ಧೆಯಲ್ಲಿ ಗೆಸ್ಟ್ ಪೋಸ್ ಕೊಡುತ್ತಿರುವುದಷ್ಟೇ ಅಲ್ಲ, ತಮ್ಮ ಹೊಸ ಲುಕ್‌ನ ಫೋಟೋಶೂಟ್ ಮಾಡಿಸಿದ್ದಾರೆ. ಕಳೆದ ಆರು ತಿಂಗಳಿಂದ ಜಿಮ್‌ನಲ್ಲಿ ಸಖತ್ ವರ್ಕೌಟ್ ಮಾಡಿ, ಉಪ್ಪು-ಖಾರವಿಲ್ಲದ ಡಯಟ್ ಫುಡ್ ತಿಂದು ದೇಹವನ್ನು ಸಖತ್ ಫಿಟ್ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next