Advertisement

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

07:14 PM Nov 21, 2024 | Team Udayavani |

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನವು ಪೂರ್ಣಾವಧಿಯ ಅಧಿವೇಶನವಾದರೆ ಅದಕ್ಕೆ ಅರ್ಥ ಬರುತ್ತದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರ ಅಭಿಪ್ರಾಯ ಪಟ್ಟರು.

Advertisement

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಅಡಿಪಾಯ ಹಾಕಿದ ಕೆಎಲ್ ಇ ಸಂಸ್ಥೆಯ ಮೂಲ ಉದ್ದೇಶ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವುದಾಗಿತ್ತು. ಆದರೆ ಒಂದು ದಶಕಕ್ಕೂ ಅಧಿಕ ಕಾಲದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಸಮಸ್ಯೆಗಳ ಪರಿಹಾರ ಮಾತ್ರ ಶೂನ್ಯ. ಆದ್ದರಿಂದ ಒಂದು ತಿಂಗಳ ಕಾಲ ಪೂರ್ಣ ಪ್ರಮಾಣದ ಅಧಿವೇಶನ ನಡೆಸುವದರೊಂದಿಗೆ ಈ ಭಾಗದ ಸಮಸ್ಯೆಗಳ ಸಂಪೂರ್ಣ ಚರ್ಚೆಯಾಗಬೇಕು. ಕೇವಲ ಪ್ರತಿಭಟನೆ ಹೋರಾಟಕ್ಕೆ ಸೀಮಿತಗೊಳಿಸದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಯ ಕನಸು ಇಟ್ಟುಕೊಂಡು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು 2012ರಲ್ಲಿ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಯಿತು. ಆದರೆ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಸಾಧನೆ ಶೂನ್ಯ. ಪ್ರತಿ ವರ್ಷ ಕೇವಲ 10 ದಿನಗಳ ಕಾಟಾಚಾರದ ಅಧಿವೇಶನವನ್ನು ಜರುಗಿಸುವ ಮೂಲಕ ಜನರ ಭಾವನೆಗಳಿಗೆ ತಣ್ಣೀರು ಎರಚಲಾಗಿದೆ ಎಂದರು.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಅಧಿವೇಶನವು ವ್ಯಾಖ್ಯಾನವಾಗಬೇಕಾಗಿತ್ತು. ಆದರೆ ದಶಕಗಳಾದರೂ ಯಾವೊಂದು ಅಧಿವೇಶನವೂ ಕೂಡ ಯಶಸ್ಸನ್ನು ಪಡೆದುಕೊಳ್ಳದೆ ಇರುವುದು ದುರ್ದೈವದ ಸಂಗತಿ. ದೀರ್ಘಾವಧಿಯ ಅಧಿವೇಶನಗಳನ್ನು ಜರುಗಿಸಿದರೆ ಬೆಳಗಾವಿ ಅಧಿವೇಶನ ಸಫಲಗೊಳ್ಳಲು ಸಾಧ್ಯ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next