Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರೂ ನನ್ನ ಮಾತಿಗೆ ಗೌರವ ಕೊಟ್ಟರೆ ಪ್ರಕರಣ ಇಲ್ಲಿಗೇ ಮುಗಿಸುತ್ತೇನೆ. ಈಗಾಗಲೇ ಈ ಬಗ್ಗೆ ಹೇಳಿದ್ದೇನೆ. ಶುಕ್ರವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಿಐಡಿ ತನಿಖೆ ಆದೇಶ ವಿಚಾರವಾಗಿ ಬೆಳಗಾವಿ ಪೊಲೀಸ್ ಆಯುಕ್ತರು ನನಗೆ ಪತ್ರ ಬರೆದಿದ್ದಾರೆ. ಅದನ್ನು ನಮ್ಮ ಕಾರ್ಯದರ್ಶಿಗೆ ಕಳುಹಿಸಿದ್ದೇನೆ. ಯಾವ ರೀತಿಯ ಪಂಚನಾಮೆ ಮಾಡುತ್ತಾರೆ ಎನ್ನುವುದನ್ನು ಮೊದಲು ತಿಳಿಸಲಿ. ಅನಂತರ ನಾವು ನಿರ್ಧಾರ ಮಾಡುತ್ತೇವೆ.
ಸಿ.ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳಕರ್‌ಗೆ ನಿಂದನೆ ಮಾಡಿದ್ದರ ಬಗ್ಗೆ ಪರಿಷತ್‌ನ ಕೆಮರಾದಲ್ಲಿ ಏನೂ ಸಿಕ್ಕಿಲ್ಲ. ಖಾಸಗಿಯವರು ಕೆಲವೆಡೆ ತೋರಿಸಿದ್ದಾರೆ. ಹೊರಗಿನವರ ಕೆಮರಾದಲ್ಲಿ ಬಂದ ಆ ವೀಡಿಯೋಗಳನ್ನು ನಮಗೆ ಕೊಟ್ಟರೆ ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೊದಲ ಬಾರಿಗೆ ಈ ರೀತಿ ಘಟನೆ ನಡೆದಿದೆ. ಇದೊಂದು ವಿಚಿತ್ರ ಘಟನೆ ಎಂದರು.