Advertisement
ಗುರುವಾರ ರಾತ್ರಿ ಡೀಗೊ ಶ್ವಾಟ್ಸìಮನ್ ವಿರುದ್ಧ 6-3, 6-4 ಅಂತರದ ಗೆಲುವಿನ ವೇಳೆ ನಡಾಲ್ ಈ ದಾಖಲೆ ನಿರ್ಮಿಸಿದರು. 1984ರಲ್ಲಿ ಜಾನ್ ಮೆಕೆನ್ರೊ ಸತತ 49 ಸೆಟ್‌ಗಳನ್ನು ಗೆದ್ದದ್ದು ಈವರೆಗಿನ ದಾಖಲೆಯಾಗಿತ್ತು. ಆ ವರ್ಷ ಮೆಕೆನ್ರೊ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸಿದ್ದರು. ಇದೇ ಹಾದಿಯಲ್ಲಿ ಮುನ್ನಡೆಯುವ ಸೂಚನೆಯಿತ್ತಿರುವ ನಡಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಮರಿಯಾ ಶರಪೋವಾ ಕೂಡ 3 ಸೆಟ್‌ಗಳ ಹೋರಾಟದ ಬಳಿಕ ಹಾಲೆಂಡಿನ ಕಿಕಿ ಬರ್ಟೆನ್ಸ್ ಕೈಯಲ್ಲಿ 4-6, 6-2, 6-3 ಅಂತರದ ಸೋಲುಂಡರು. ಕಳೆದೆರಡು ವರ್ಷಗಳ ಚಾಂಪಿಯನ್ ಸಿಮೋನಾ ಹಾಲೆಪ್ ಅವರನ್ನು ಕ್ಯಾರೋಲಿನಾ ಪ್ಲಿಸ್ಕೋವಾ 6-4, 6-3ರಿಂದ ಮಣಿಸಿದರು. ಇದರಿಂದ ಹಾಲೆಪ್‌ಗೆ ಪ್ರಶಸ್ತಿಯ ಹ್ಯಾಟ್ರಿಕ್ ತಪ್ಪಿತು. ಕಿಕಿ ಬರ್ಟೆನ್ಸ್ ಅವರ ಮುಂದಿನ ಸುತ್ತಿನ ಎದುರಾಳಿ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ. ಅವರು ಕಾರ್ಲಾ ಸೂರೆಜ್ ನವಾರೊ ವಿರುದ್ಧ 6-2, 6-3 ಅಂತರದ ಜಯ ಸಾಧಿಸಿದರು.