Advertisement

Rafael Nadal Retire: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ

11:21 PM Nov 20, 2024 | Team Udayavani |

ಮಲಾಗ (ಸ್ಪೇನ್‌): ದೈತ್ಯ ಆಟಗಾರ ರಫೆಲ್‌ ನಡಾಲ್‌ ಸೋಲಿನೊಂದಿಗೆ ತಮ್ಮ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ್ದಾರೆ.

Advertisement

ತವರಲ್ಲೇ ನಡೆದ ನೆದರ್ಲೆಂಡ್ಸ್‌ ಎದುರಿನ ಡೇವಿಸ್‌ ಕಪ್‌ ಸರಣಿಯ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ ಅವರನ್ನು ವಿಶ್ವದ 80ನೇ ರ್‍ಯಾಂಕ್‌ ಆಟಗಾರ ಬೋಟಿಕ್‌ ವಾನ್‌ ಡೆ ಝಾಂಡ್‌ಸ್ಕಲ್‌ 6-4, 6-4 ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿದರು. ಇದರೊಂದಿಗೆ ಸ್ಪೇನ್‌ 1-2 ಅಂತರದ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿತು.

ಅಭಿಮಾನಿಗಳ “ರಫಾ, ರಫಾ…’ ಭೋರ್ಗರೆತದ ನಡುವೆ ರ್ಯಾಕೆಟ್‌ ಬೀಸತೊಡಗಿದ ರಫೆಲ್‌ ನಡಾಲ್‌ಗೆ ಗೆಲುವಿನ ಆಟವಾಡಲು ಸಾಧ್ಯವಾಗಲಿಲ್ಲ.
ಸೋಲಿನ ಬಳಿಕ ನಡಾಲ್‌ ಅತ್ಯಂತ ಭಾವುಕರಾಗಿ ವೀಕ್ಷಕರತ್ತ ಕೈ ಬೀಸತೊಡಗಿದರು. ಎಲ್ಲರೂ ಎದ್ದು ನಿಂತು ಈ ಮಹಾನ್‌ ಟೆನಿಸಿಗನಿಗೆ ಗೌರವ ಸಲ್ಲಿಸಿದರು. ಬಳಿಕ ತಮ್ಮ ವೃತ್ತಿ ಬದುಕಿನ ವೀಡಿಯೊ ಒಂದನ್ನು ಪ್ರದರ್ಶಿಸುವಾಗ ನಡಾಲ್‌ ಕಣ್ಣೀರಿಟ್ಟರು.

“ನಾನು ಟೆನಿಸ್‌ ಆಡಿ ಆಯಾಸಗೊಂಡಿಲ್ಲ. ಆದರೆ ನನ್ನ ದೇಹ ಇನ್ನು ಆಡಲು ಬಯಸುವುದಿಲ್ಲ. ಈ ಪರಿಸ್ಥಿತಿಯನ್ನು ನಾನು ಒಪ್ಪಿಕೊಳ್ಳಲೇ ಬೇಕು. ನಿರೀಕ್ಷೆಗಿಂತಲೂ ಹೆಚ್ಚಿನ ಟೆನಿಸ್‌ ನಾನು ಆಡಿದ್ದೇನೆ. ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ನನ್ನ ಈ ಬದುಕಿಗೆ ಮತ್ತು ಇದರ ಹಿಂದಿರುವವರಿಗೆ ಕೃತಜ್ಞನಾಗಿದ್ದೇನೆ’ ಎಂಬುದಾಗಿ ನಡಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next