ಹುಣಸೂರು: ನ್ಯಾಯಾಮೂರ್ತಿ ನಾಗಮೋಹನದಾಸ್ ವರದಿಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ಆಗ್ರಹಿಸಿ ಹಾಗೂ ಬೆಂಗಳೂರಿನಲ್ಲಿ ಪರಮ ಪೂಜ್ಯ ಪ್ರಸನ್ನಾನಂದ ಪುರಿ ಸ್ವಾಮಿಜಿಗಳು ನಡೆಸುತ್ತಿರುವ ಧರಣಿ ಬೆಂಬಲಿಸಿ ಹುಣಸೂರಿನ ಪ್ರತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಮತ್ತು ಪಕ್ಷಾತೀತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಸಂವಿಧಾನ ಸರ್ಕಲ್ ನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ವರದಿ ಜಾರಿಗೊಳಿಸಲು ವಿಫಲವಾಗಿರುವ ಸರಕಾರದ ವಿರುದ್ದ ಧಿಕ್ಕಾರ ಮೊಳಗಿಸಿದರು.
ಈ ವೇಳೆ ಮಾತನಾಡಿದ ದಸಂಸ ಮುಖಂಡರಾದ ನಿಂಗರಾಜಮಲ್ಲಾಡಿ, ಹರಿಹರ ಆನಂದಸ್ವಾಮಿ, ಕಲ್ಕುಣಿಕೆ ಬಸವರಾಜು ಮತ್ತಿತರರು ನ್ಯಾಯಾಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಆದೇಶಿಸುತ್ತು. ಇದಕ್ಕಾಗಿ ಸರಕಾರಿ ಯಂತ್ರ ಸಿಬ್ಬಂದಿಗಳು ಸೇರಿದಂತೆ ಕೋಟ್ಯಾಂತರ ರೂ ವ್ಯಯಿಸಿದೆ. ಸಮಿತಿ ವರದಿ ನೀಡಿ ಎರಡು ವರ್ಷಗಳೇ ಕಳೆದರೂ ಜಾರಿಗೆ ಬಿಜೆಪಿ ಸರಕಾರ ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾದಂತಾಗಿದ್ದು, ತಕ್ಷಣವೇ ವರದಿ ಅಂಗೀಕರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಸ್ವಾಮಿಗೌಡ, ಮುಖಂಡರಾದ ನಿಲುವಾಗಿಲು ಪ್ರಭಾಕರ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕುನ್ನೇಗೌಡ, ಗಣೇಶ್ ಕರಿಯಪ್ಪಗೌಡ, ಕುಮಾರ್, ಸ್ವಾಮಿನಾಯಕ .ಡಿ.ಕುಮಾರ್, ಶಿವಣ್ಣ, ಮಯೂರ ಸೇರಿದಂತೆ ಅನೇಕರಿದ್ದರು.