Advertisement

ಕಡಬದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

10:21 AM Dec 16, 2017 | Team Udayavani |

ಕಡಬ: ಹೊನ್ನಾವರದ ಪರೇಶ್‌ ಮೇಸ್ತ ಅಸಹಜ ಸಾವಿನ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ ಎನ್ನುವ ಸಂಶಯ ಇರುವುದರಿಂದ ಪ್ರಕರಣದ ತನಿಖೆಯನ್ನು ಎನ್‌ ಐಎಗೆ ಒಪ್ಪಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಕಡಬದ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಕಡಬದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಭಯೋತ್ಪಾದಕ ಸಂಘಟನೆಗಳ ಕೈವಾಡದ ಶಂಕೆ
ಪೇಟೆಯ ಬಸ್ಸು ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಶಾಸಕ ಎಸ್‌. ಅಂಗಾರ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಹಿಂದೂ ಕಾರ್ಯಕರ್ತರ ಕೊಲೆ ನಡೆದಿದೆ. ಹಿಂದೂ ಕಾರ್ಯಕರ್ತರ ಕೊಲೆಗಳ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡದ ಶಂಕೆಯಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಇದ್ದರೂ ಅಂತಹ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಲಿಲ್ಲ.

ರಾಜ್ಯ ಸರಕಾರದ ಓಲೈಕೆಯ ರಾಜಕಾರಣದಿಂದ ಇಂತಹ ಸಂಘಟನೆಗಳು ಎಲ್ಲೆ ಮೀರಿ ವರ್ತಿಸುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕ್ರಮಗಳನ್ನು ಮತ್ತು ಕಾರ್ಯಕರ್ತರ ಶಕ್ತಿಯನ್ನು ಪೊಲೀಸರ ಮೂಲಕ ರಾಜ್ಯ ಸರಕಾರ ಧಮನಿಸುತ್ತಿದೆ. ಪರೇಶ್‌ ಮೇಸ್ತ ಸಾವು ಪ್ರಕರಣದ ತನಿಖೆಯನ್ನು ಕೂಡಲೇ ಎನ್‌ಐಎಗೆ ನೀಡಬೇಕು. ಹತ್ಯೆ ಹಿಂದಿರುವ ಸಮಾಜಘಾತಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎನ್‌ಐಎ ತನಿಖೆಗೆ ಆಗ್ರಹ
ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ರವಿರಾಜ್‌ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ನಡೆದ ಪ್ರಶಾಂತ್‌ ಪೂಜಾರಿ ಮೂಡಬಿದ್ರೆ, ರಾಜು ಮೈಸೂರು, ಕುಟ್ಟಪ್ಪ ಕೊಡಗು, ಶರತ್‌ ಮಡಿವಾಳ ಬಿ.ಸಿ.ರೋಡ್‌, ಪ್ರಸ್ತುತ ಪರೇಶ್‌ ಮೇಸ್ತ ಹೀಗೆ ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣ ಹಿಂದೆ ಜಿಹಾದಿ, ಉಗ್ರ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆಯಿದ್ದರೂ ಸರಕಾರ ಕ್ರಮ ಕೈಗೊಳ್ಳುತಿಲ್ಲ ಎಂದು ಆರೋಪಿಸಿದರು. ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಅವರು ಆಗ್ರಹಿಸಿದರು.

ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ತಾ.ಪಂ. ಸದಸ್ಯೆ ಪಿ.ವೈ.ಕುಸುಮಾ, ಬಿಜೆಪಿ ಮುಖಂಡರಾದ ಸತೀಶ್‌ ನಾಯಕ್‌, ಪ್ರಕಾಶ್‌ ಎನ್‌.ಕೆ., ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮೋಹನ ಕೊಯಿಲ, ತಾ| ಕಾರ್ಯದರ್ಶಿ ವೆಂಕಟ್ರಮಣ ಕುತ್ಯಾಡಿ, ನಗರ ಸಂಚಾಲಕ ಪ್ರಮೋದ್‌ ರೈ, ನ್ಯಾಯವಾದಿ ಪ್ರಶಾಂತ್‌ ಪಂಜೋಡಿ, ಕಡಬ ತಾ| ಅಧ್ಯಕ್ಷ ಹರೀಶ್‌ ಉಂಡಿಲ, ಬಜರಂಗದಳ ಮುಖಂಡ ವಾಸುದೇವ ಗೌಡ ಕೊಲ್ಲೆಸಾಗು, ತಾ| ಸಹಸಂಚಾಲಕ ಯತೀಶ್‌ ಹೊಸಮನೆ, ಶ್ರೀರಾಮ ಸೇನೆಯ ಗೋಪಾಲ್‌ ನಾೖಕ್‌ ಮೇಲಿನಮನೆ, ಮೋಹನ ಕೆರೆಕೋಡಿ, ಪ್ರಮುಖರಾದ ಜಯರಾಮ ಆರ್ತಿಲ, ಸುರೇಶ್‌ ದೇಂತಾರು, ಶಿವಪ್ರಸಾದ್‌ ರೈ ಮೈಲೇರಿ, ದೇವಿ ಪ್ರಸಾದ್‌ ಮರ್ದಾಳ, ಕೃಷ್ಣ ಅಲುಂಗೂರು, ರಘುರಾಮ ನಾ„ಕ್‌, ಕಿಶನ್‌ ಕುಮಾರ್‌ ರೈ, ಮಂಕುಡೆ ವೆಂಕಟ್ರಮಣ ರಾವ್‌, ಸರೋಜಿನಿ ಆಚಾರ್‌, ಗಿರೀಶ್‌ ಎ.ಪಿ., ರಾಮಚಂದ್ರ ನೂತನ್‌, ಅಶೋಕ್‌ ಕುಮಾರ್‌ ಪಿ., ಹರೀಶ್‌ ಕೋಡಂದೂರು, ದಾಮೋದರ ಡೆಪ್ಪುಣಿ, ಹರ್ಷ ಕೋಡಿ, ಜಯಲಕ್ಷ್ಮೀ, ಬಾಲಕೃಷ್ಣ ಗೌಡ ವಾಲ್ತಾಜೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ವಿಶ್ವ ಹಿಂದೂ ಪರಿಷದ್‌ ಕಡಬ ಪ್ರಖಂಡದ ಅಧ್ಯಕ್ಷ ಜನಾರ್ದನ ರಾವ್‌ ಅಡೂರು ಸ್ವಾಗತಿಸಿ, ನಿರೂಪಿಸಿದರು. ಗೋವಿಂದರಾಜ್‌ ಭಟ್‌ ವಂದಿಸಿದರು. ಬಳಿಕ ಕಡಬ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next