Advertisement
ಪ. ಬಂಗಾಲದ ಕೋಲ್ಕತಾ ನಿವಾಸಿ ಸಾಯನ್ ಘೋಷ್ ಅವರು ನ. 23ರಂದು ಢಾಕಾದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ತಾನು ನ. 26ರಂದು ಸ್ನೇಹಿತನೊಂದಿಗೆ ಐಸ್ಕ್ರೀಂ ಪಾರ್ಲರ್ಗೆ ತೆರಳಿದ್ದ ವೇಳೆ ಹಲವಾರು ಮುಸ್ಲಿಂ ಯುವಕರು ಸುತ್ತುವರಿದು ದಾಳಿ ನಡೆಸಿದರು ಎಂದು ಪ್ರಸ್ತುತ ಸ್ವದೇಶಕ್ಕೆ ಹಿಂದಿರುಗಿರುವ ಘೋಷ್ ಹೇಳಿದ್ದಾರೆ.
Related Articles
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರ ಬಿಡುಗಡೆಗೆ ಆಗ್ರಹಿಸಿ ಒಂದು ಸಾವಿರಕ್ಕೂ ಅಧಿಕ ಸಂತರು ಸೋಮವಾರ ಪಶ್ಚಿಮ ಬಂಗಾಲದ ಉತ್ತರ 24 ಪರಗಣದ ಪೆಟ್ರಾಪೋಲ್ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತೀಯ ಸಂತ ಸಮಿತಿ ಈ ಪ್ರತಿಭಟನೆ ಹಮ್ಮಿಕೊಂಡಿತ್ತು.
Advertisement
ಬಾಂಗ್ಲಾ ಪರಿಸ್ಥಿತಿಯ ಬಗ್ಗೆ ಭಾರತದ ಸ್ಪಷ್ಟ ನಿಲುವು ಏನು ಎಂಬ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು. ಬಾಂಗ್ಲಾದಲ್ಲಿ ತೊಂದರೆಗೆ ಈಡಾಗಿರುವ ಭಾರತೀಯರನ್ನು ಕೂಡಲೇ ರಕ್ಷಿಸಿ ದೇಶಕ್ಕೆ ಮರಳಿ ಕರೆ ತರಬೇಕು.-ಮಮತಾ ಬ್ಯಾನರ್ಜಿ, ಪ. ಬಂಗಾಲ ಸಿಎಂ