Advertisement

ವೃತ್ತಿಪರ ಕೋರ್ಸ್‌: ಸೀಟ್‌ ಮ್ಯಾಟ್ರಿಕ್ಸ್‌ ವಿಳಂಬ 

06:00 AM Jul 02, 2018 | |

ಬೆಂಗಳೂರು: ಜುಲೈ ತಿಂಗಳು ಆರಂಭವಾದರೂ ಇನ್ನೂ ಪ್ರಸ್ತಕ ಸಾಲಿನ ವೃತ್ತಿಪರ ಕೋರ್ಸ್‌ಗಳ ಸಂಪೂರ್ಣ ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ರಾಜ್ಯ ಸರ್ಕಾರ ಪ್ರಕಟಿಸಿಲ್ಲ.

Advertisement

ಸದ್ಯಕ್ಕೆ ಬರೀ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಸೀಟ್‌ ಮ್ಯಾಟ್ರಿಕ್ಸ್‌ ಮಾತ್ರ ಪ್ರಕಟವಾಗಿದೆ. ಖಾಸಗಿ ಕಾಲೇ ಜುಗಳ ಸೀಟು ವಿವರ ಬಂದಿಲ್ಲ.

ಜು.31ರೊಳಗೆ ವೃತ್ತಿ ಪರ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಮುಗಿಸಬೇಕಾಗಿದ್ದು,ಇನ್ನೂ ಅಭ್ಯರ್ಥಿಗಳಿಗೆ ಆಪ್ಷನ್‌ ಎಂಟ್ರಿ ನೀಡಲಾಗದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಒಂದು ವೇಳೆ ಖಾಸಗಿ ಕಾಲೇಜುಗಳ ಸೀಟು ಮ್ಯಾಟ್ರಿಕ್ಸ್‌ ಬರುವ ಮುನ್ನ ಆಪ್ಷನ್‌ ಎಂಟ್ರಿಗೆ ಅವಕಾಶ ಕಲ್ಪಿಸಿದರೆ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ಆಯ್ಕೆಗೆ ಅವ ಕಾ ಶವೇ ಇಲ್ಲದೆ ಅನ್ಯಾಯವಾಗಲಿದೆ.

38 ಸರ್ಕಾರಿ  ಹಾಗೂ ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳ 12,700 ಸೀಟುಗಳು ಮತ್ತು ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳ ಸುಮಾರು 2200 ಸೀಟುಗಳನ್ನು ಈಗಾಗಲೇ ಪ್ರಾಧಿಕಾರ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್‌ ಆದೇಶದನ್ವಯ ಜುಲೈ 31ರೊಳಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆದರೆ, ಇದುವರೆಗೆ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಹೊರತುಪಡಿಸಿ ಬೇರ್ಯಾವುದೇ  ಪ್ರಕ್ರಿಯೆ ನಡೆದಿಲ್ಲ. ಪೂರ್ಣ ಪ್ರವೇಶಾತಿ ಪ್ರಕ್ರಿಯೆಯನ್ನು  ಮುಗಿ ಸಲು ಕನಿಷ್ಠ ಒಂದೂ ವರೆ ತಿಂಗಳು ಬೇಕಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆ ಮುಗಿಯದೇ ಇದ್ದರೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Advertisement

ಖಾಸಗಿ ಕಾಲೇಜುಗಳಲ್ಲಿ ಸೀಟು ಹಂಚಿಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿಗಳ ಮಧ್ಯೆ ಪ್ರತಿವರ್ಷ ಒಪ್ಪಂದ ಮಾಡಿಕೊಳ್ಳಬೇಕು. ಅದಕ್ಕೆ ಮುನ್ನ ಶುಲ್ಕ ನಿಗದಿ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಈ ವರ್ಷ ಶುಲ್ಕ ನಿಗದಿಯಾಗಿದೆಯಾದರೂ ಎಷ್ಟು ಸೀಟುಗಳನ್ನು ಖಾಸಗಿ ಕಾಲೇಜುಗಳು ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಒಪ್ಪಂದವಾಗದ ಕಾರಣ ಸರ್ಕಾರ ಇನ್ನೂ ಸೀಟ್‌ಮ್ಯಾಟ್ರಿಕ್ಸ್‌ ಪ್ರಕಟಿಸಿಲ್ಲ.

ಆಪ್ಷನ್‌ ಎಂಟ್ರಿ ಯಾವಾಗ?:
ಪ್ರಸಕ್ತ ಸಾಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ.ಫಾರ್ಮಾ, ಡಿ.ಫಾ ರ್ಮಾ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟಿನ ಪ್ರವೇಶ ಪ್ರಕ್ರಿಯೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪ್ರಾಧಿಕಾರದ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಸೀಟು ಪಡೆಯಲು ಬೇಕಾದ ಆಪ್ಷನ್‌ ಎಂಟ್ರಿಗೆ (ಆಯ್ಕೆ) ವೆಬ್‌ಸೈಟ್‌ ಲಿಂಕ್‌ ಒಪನ್‌ ಮಾಡುವುದೊಂದೇ ಬಾಕಿ ಇರುವ ಕೆಲಸ. ಆದರೆ, ಖಾಸಗಿ ಕಾಲೇಜಿನ ಸೀಟ್‌ ಮ್ಯಾಟ್ರಿಕ್ಸ್‌ ಬಾರದೇ ಇರುವುದರಿಂದ ಆಪ್ಷನ್‌ ಎಂಟ್ರಿ ಲಿಂಕ್‌ ನೀಡಲು ಪ್ರಾಧಿಕಾರದ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಖಾಸಗಿ ಕಾಲೇಜಿನ ಸುಮಾರು 40 ಸಾವಿರಕ್ಕೂ ಅಧಿಕ ಸೀಟುಗಳು ಸೀಟ್‌ಮ್ಯಾಟ್ರಿಕ್ಸ್‌ಗೆ ಲಭ್ಯವಿದೆ. ಈ ಸೀಟುಗಳು ಬಾರದೆ ಆಪ್ಷನ್‌ ಎಂಟ್ರಿ ನೀಡಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಈಗ ಆಪ್ಷನ್‌ ಎಂಟ್ರಿಗೆ ಅವಕಾಶ ನೀಡಿದರೆ ಸರ್ಕಾರಿ ಕಾಲೇಜುಗಳ ಸೀಟನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸಾಧ್ಯ. ಖಾಸಗಿ ಕಾಲೇಜಿನಲ್ಲಿ ಇರುಷ್ಟು ವಿಭಿನ್ನ ಎಂಜಿನಿಯರಿಂಗ್‌ ವಿಭಾಗಗಳು ಸರ್ಕಾರಿ ಕಾಲೇಜಿನಲ್ಲಿ ಇಲ್ಲ. ಒಮ್ಮೆ ಸೀಟು ಆಯ್ಕೆ ಮಾಡಿಕೊಂಡರೆ, ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯ ಕಾಲೇಜು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಪ್ಷನ್‌ ಎಂಟ್ರಿ ಲಿಂಕ್‌ ನೀಡಲು ಪ್ರಾಧಿಕಾರದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಎಲ್ಲ ಕೋರ್ಸ್‌ಗೂ ಒಂದೇ ಲಿಂಕ್‌:
ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌ ಕೋರ್ಸ್‌ ಹೊರತುಪಡಿಸಿ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಕೃಷಿ ವಿಜ್ಞಾನ, ಪಶುಸಂಗೋಪನೆ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಒಂದೇ ಲಿಂಕ್‌ ಮೂಲಕ ಆಪ್ಷನ್‌ ಎಂಟ್ರಿ ಮಾಡಬಹುದು. ಖಾಸಗಿ ಕಾಲೇಜಿನ ಸೀಟ್‌ ಮ್ಯಾಟ್ರಿಕ್‌ ಪ್ರಕಟವಾದ ನಂತರ ಪ್ರಾಧಿಕಾರದಿಂದ ಆಪ್ಷನ್‌ಎಂಟ್ರಿಗೆ ಅವಕಾಶ ನೀಡಲಾಗುತ್ತದೆ.  ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಹೀಗೆ ಎಲ್ಲ ಮಾದರಿಯ ಕಾಲೇಜಿನ ಸೀಟುಗಳ ವಿವರವೂ ಅಲ್ಲಿ ಲಭ್ಯವಾಗಲಿದೆ. ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ಗೆ ಅನುಗುಣವಾಗಿ ತಮಗೆ ಬೇಕಾದ ಕಾಲೇಜು ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ಇರುತ್ತದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪದೇಪದೆ ಸೀಟು ಬದಲಾವಣೆಗೆ ವೆಬ್‌ಸೈಟ್‌ನಲ್ಲಿ ಅವಕಾಶವೂ ಇಲ್ಲ. ವಿದ್ಯಾರ್ಥಿ ಒಮ್ಮೆ ಪಡೆದ ಸೀಟು ಅಂತಿಮಗೊಳಿಸಿ, ಶುಲ್ಕ ಪಾವತಿಸಿ ಸಂಬಂಧಪಟ್ಟ ಕಾಲೇಜಿಗೆ ಸೇರಿಕೊಳ್ಳಲು ಬೇಕಾದ ಪ್ರವೇಶ ಪತ್ರವನ್ನು ವೆಬ್‌ಸೈಟ್‌ ಮೂಲಕವೇ ನೀಡಲಾಗುತ್ತದೆ. ಎಲ್ಲ ಕಾಲೇಜಿನ ಸೀಟ್‌ ಮ್ಯಾಟ್ರಿಕ್ಸ್‌ ಬಂದ ನಂತರವೇ ಆಪ್ಷನ್‌ ಎಂಟ್ರಿಗೆ ಅವಕಾಶ ನೀಡುತ್ತೇವೆ ಎಂದು ವಿವರಿಸಿದರು.

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಜುಲೈ 31ರೊಳಗೆ ಪೂರ್ಣಗೊಳಿಸಬೇಕು. ಸರ್ಕಾರದಿಂದ ಖಾಸಗಿ ಕಾಲೇಜುಗಳ ಸೀಟ್‌ ಮ್ಯಾಟ್ರಿಕ್ಸ್‌ ನೀಡದೆ ಆಪ್ಷನ್‌ ಎಂಟ್ರಿ ಲಿಂಕ್‌ ಒಪನ್‌ ಮಾಡಲು ಸಾಧ್ಯವಿಲ್ಲ. ಸೀಟು ಹಂಚಿಕೆ ಕುರಿತು ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಒಪ್ಪಂದದ ಬಗ್ಗೆಯೂ ಮಾಹಿತಿ ಬಂದಿಲ್ಲ.
– ಗಂಗಾಧರಯ್ಯ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಧಿಕಾರ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next