ನವದೆಹಲಿ: ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಸರ್ಕಾರದ ಜತೆಗೆ ಭಾರತ ಸರ್ಕಾರ ಇದೇ ಮೊದಲ ಬಾರಿಗೆ ಮಾತುಕತೆ ನಡೆಸಿದೆ.
ಐಎಫ್ಎಸ್ ಅಧಿಕಾರಿ ಜೆ.ಪಿ.ಸಿಂಗ್ ನೇತೃತ್ವದ ನಿಯೋಗ ಕಾಬೂಲ್ನಲ್ಲಿ ಅಲ್ಲಿನ ರಕ್ಷಣಾ ಸಚಿವ ಮುಲ್ಲಾ ಮೊಹಮ್ಮದ್ ಯಾಕೂಬ್ ಜತೆ ಚರ್ಚೆ ನಡೆಸಿದೆ.
ಈ ಸಂದರ್ಭದಲ್ಲಿ ಇರಾನ್ನಲ್ಲಿರುವ ಚಬಹಾರ್ ಬಂದರಿನ ಮೂಲಕ ತಮ್ಮ ದೇಶದ ಉದ್ಯಮಿಗಳು ಸರಕುಗಳ ಆಮದು-ರಫ್ತು ಸೇರಿ ದಂತೆ ವ್ಯಾಪಾರ ವಹಿ ವಾಟು ನಡೆಸಲು ಅವಕಾಶ ಕಲ್ಪಿಸುವ ಆಫರ್ ಅನ್ನೂ ಯಾಕೂಬ್ ನೀಡಿದ್ದಾರೆ.
ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದುವ ಬಗ್ಗೆ ಅಲ್ಲಿನ ಸರ್ಕಾರ ಈ ಹಿಂದೆಯೇ ಆಸಕ್ತಿ ವಹಿಸಿತ್ತು.
ಅಲ್ಲದೆ, ಭಾರತ ಮಾನವೀಯ ನೆರವುಗಳನ್ನು ಮುಂದುವರಿಸುವುದಕ್ಕೂ ತಾಲಿಬಾನ್ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿ ದ್ದಾರೆ.
ಅಫ್ಘಾನಿಸ್ತಾನವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಲು ಅವಕಾಶ ಕೊಡುವುದಿಲ್ಲ ಎಂದು ಅಫ್ಘಾನಿಸ್ತಾನ ಆಡಳಿತ ಭರವಸೆ ನೀಡಿದ್ದರಿಂದ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ನವದೆಹಲಿಯಲ್ಲಿ ರಾಯಭಾರಿ ನೇಮಕಕ್ಕೂ ಆ ದೇಶ ಉತ್ಸುಕವಾಗಿದೆ.