Advertisement

Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್‌

12:47 AM Nov 04, 2024 | Team Udayavani |

ಉಡುಪಿ: ರಾಜ್ಯ ಸರಕಾರದ ಅಲ್ಪಸಂಖ್ಯಾಕರ ಓಲೈಕೆ ನೀತಿ ಮತ್ತು ರೈತರು, ಜನ ಸಮಾನ್ಯರ ಆಸ್ತಿಯನ್ನು ವಕ್ಫ್ ಮಂಡಳಿಗೆ ನೋಂದಾ ಯಿಸುತ್ತಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಮೂರು ಹಂತಗಳ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಹೇಳಿದರು.

Advertisement

ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ರೈತರು, ಜನ ಸಾಮಾ ನ್ಯರಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಈಗ ಹಿಂದೂ ಗಳ ಮಠಮಂದಿರ, ರೈತರ ಜಾಗವನ್ನು ವಕ್ಫ್ ಬೋರ್ಡ್‌ಗೆ ನೋಂದಾಯಿಸಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾಶೀರ್ವಾದ ಹಾಗೂ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಕುಮ್ಮಕ್ಕಿನಿಂದ ಬೀದರ್‌, ವಿಜಯಪುರ, ಕೋಲಾರದಲ್ಲಿ ವಕ್ಫ್ ಬೋರ್ಡ್‌ಗೆ ರೈತರು ಹಾಗೂ ಜನ ಸಾಮಾನ್ಯರ ಪಹಣಿಯನ್ನು ನೋಂದಾಯಿಸಲಾಗಿದೆ ಎಂಬ ಮಾಹಿತಿ ಇದೆ. ಇದು ಸರಕಾರದ ಆದೇಶವಾಗಿದ್ದರಿಂದ ಒಂದೇ ಜಿಲ್ಲೆಗೆ ಆಗಲು ಸಾಧ್ಯವಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಆಗಿರುವ ಸಾಧ್ಯತೆಯಿದೆ ಎಂದರು.

ಜಿಲ್ಲಾಧಿಕಾರಿಗಳಿಗೆ ಮನವಿ
ನ. 6ರಂದು ಮಣಿಪಾಲದ ಉಪೇಂದ್ರ ಪೈ ವೃತ್ತ(ಕಾಯಿನ್‌ ಸರ್ಕಲ್‌)ದಿಂದ ಪ್ರತಿಭಟನ ಜಾಥ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಅದೇ ರೀತಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಎಂದರು.

ಪಹಣಿ ಪರಿಶೀಲನೆ
ನ.7 ಮತ್ತು 8ರಂದು ಬಿಜೆಪಿ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರ ಜತೆ ಸೇರಿ ತಾಲೂಕು ಪಂಚಾಯತಿಗೆ ಗುಂಪಾಗಿ ತೆರಳಿ ಪಹಣಿ ಪರಿಶೀಲನೆ ನಡೆಸಲಿದ್ದೇವೆ. ತಾಲೂಕು, ಜಿಲ್ಲಾ ಮಟ್ಟದಿಂದಲೇ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ಎಲ್ಲ ಪ್ರಯತ್ನ ನಡೆಸಲಿದ್ದೇವೆ. ರೈತರ ಪಹಣಿಯನ್ನು ವಕ್ಫ್ಬೋರ್ಡ್‌ಗೆ ನೋಂದಾಯಿಸಿರುವುದನ್ನು ತತ್‌ಕ್ಷಣವೇ ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

Advertisement

ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಮಾಧ್ಯಮ ಪ್ರಮುಖ್‌ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next