Advertisement

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

09:38 PM Nov 12, 2024 | Team Udayavani |

ದಾವಣಗೆರೆ: ರಾಜ್ಯ ಸರಕಾರ ಅಬಕಾರಿ ಡೀಲರ್‌ಗಳಿಂದ 700 ಅಲ್ಲ 900 ಕೋಟಿ ರೂ. ಪಡೆದಿದೆ. ಡೀಲರ್‌ಗಳೇ ರಾಜ್ಯಪಾಲರಿಗೆ ದೂರು ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ವಿಷಯ ಬಹಿರಂಗಪಡಿಸಿದ್ದಾರೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ಡೀಲರ್‌ಗಳು ದೂರು ನೀಡಿದ ಅನಂತರ ಸರಕಾರದ ಮುಖ್ಯ ಕಾರ್ಯದರ್ಶಿಗಳೇ ಸಭೆ ನಡೆಸಿದ್ದಾರೆ. ಇದಕ್ಕಿಂತಲೂ ಸಾಕ್ಷಿ, ಆಧಾರ ಬೇಕಾ? ಆದರೂ ಡಿ.ಕೆ. ಶಿವಕುಮಾರ್‌ ಸಾಕ್ಷಿ ಕೇಳುತ್ತಿದ್ದಾರೆ.

ರಾಜ್ಯ ಸರಕಾರ ಲಿಕ್ಕರ್‌ ಲಾಬಿಯ 900 ಕೋಟಿ ರೂ. ಮೂಲಕ ಹಣದ ಹೊಳೆಯನ್ನೇ ಉಪಚುನಾವಣೆಯಲ್ಲಿ ಹರಿಸಬಹುದು. ಸಚಿವ ಜಮೀರ್‌ ಚನ್ನಪಟ್ಟಣದಲ್ಲಿ ಬಹಿರಂಗವಾಗಿಯೇ ಹಣ ಹಂಚಿಕೆ ಮಾಡುತ್ತಿದ್ದ ಸಂಬಂಧ ದೂರು ಸಹ ದಾಖಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next