ಬೆಂಗಳೂರು: ಮಾಸಿಕ ಜನಸಂಪರ್ಕ ದಿವಸ್‌ಅಂಗವಾಗಿ ನಗರದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಶನಿವಾರ ನಗರ ಪೊಲೀಸ್ ಆಯುಕ್ತಕಮಲ್ ಪಂತ್ ಖುದ್ದು ತಾವೇ ಸಾರ್ವಜನಿಕರಸಮಸ್ಯೆ ಆಲಿಸಿದರು.
ನಗರದಲ್ಲಿ ಸಾರ್ವಜನಿಕರ ವಾಹನನಿಲುಗಡೆಗೆ ತುಂಬಾ ಸಮಸ್ಯೆ ಇದೆ. ಮಾಗಡಿರಸ್ತೆ ಸುಂಕದಕಟ್ಟೆ ರಸ್ತೆ ಒಳಗೊಂಡಂತೆ ಬಹುತೇಕ ಪ್ರಮುಖ ರಸ್ತೆಗ ಳಲ್ಲಿ ಸಾರ್ವಜನಿಕರುವಾಹನ ನಿಲುಗಡೆ ಮಾಡಲು ಸ್ಥಳಾವಕಾಶವೇಇಲ್ಲ ದಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಬಳಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನುಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಸಂಚಾರ ದಟ್ಟಣೆಸಮಸ್ಯೆ, 2012ನೇ ಸಾಲಿನ ಕಾನೂನು ಸುವ್ಯವಸ್ಥೆ ದೂರು ಪ್ರಕರಣ, ಪೊಲೀಸ್ ಠಾಣೆ ಸುತ್ತಮುತ್ತ ವಾಹನ ನಿಲುಗಡೆ ಸಮಸ್ಯೆ, ಪ್ರಮುಖರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ,ಅಪ್ರಾಪ್ತ ಯುವಕರು ರಾತ್ರಿ ವೇಳೆ ಮದ್ಯಪಾನಮತ್ತು ಧೂಮಪಾನ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಕೊಡುತ್ತಿರುವುದು. ರಾತ್ರಿವೇಳೆ ಒಂಟಿ ಮಹಿಳೆಯರ ಮೇಲೆ ದೌರ್ಜನ್ಯಸೇರಿದಂತೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಹಲವು ಸಮಸ್ಯೆಗಳನ್ನು ಜನರು ಆಯುಕ್ತರಗಮನಕ್ಕೆ ತಂದರು.ದೂರು ಆಲಿಸಿದ ಕಮಲ್ ಪಂತ್, ಯಾವಸ್ಥಳದಲ್ಲಿ ಏನು ಸಮಸ್ಯೆ ಎಂದು ಕೇಳಿ, ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಉñರ ¤ ಕೊಡಿಸಿದರು.
ಈ ವೇಳೆ ನಗರ ಪಶ್ಚಿಮ ವಿಭಾಗದ ಡಿಸಿಪಿಡಾ.ಸಂಜೀವ್ ಪಾಟೀಲ್, ವಿಜಯನಗರಎಸಿಪಿ ನಂಜುಡೇಗೌಡ, ಕಾಮಾಕ್ಷಿಪಾಳ್ಯ ಠಾಣೆಇನ್ಸ್‌ಪೆಕ್ಟರ್ ಪ್ರಶಾಂತ್ ಉಪಸ್ಥಿತರಿದ್ದರು.ಮಾಸಿಕ ಜನಸಂಪರ್ಕ ದಿವಸ್ ಕಾರ್ಯಕ್ರಮದ ಅಂಗವಾಗಿ ನಗರದ ಹಲವು ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಸಮಸ್ಯೆಗಳನ್ನು ಆಲಿಸಿದರು.
ಎಸ್.ಜೆ.ಪಾರ್ಕ್‌ಠಾಣೆಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಭಾರತಿ ನಗರ ಠಾಣೆಯಲ್ಲಿಬೆಂ. ಪೂರ್ವ ವಿಭಾಗದ ಎಸಿಪಿ ಎಸ್.ಮುರುಗನ್, ಜೆ.ಪಿ.ಪಾರ್ಕ್ ಠಾಣೆಯಲ್ಲಿ ಬೆಂ.ಪಶ್ಚಿಮ ವಿಭಾಗದ ಎಸಿಪಿ ಸೌಮೆಂದು ಮುಖರ್ಜಿ, ಕೆ.ಜಿ.ಹಳ್ಳಿ ಠಾಣೆಯಲ್ಲಿ ಬೆಂ. ಪೂರ್ವವಿಭಾಗದ ಡಿಸಿಪಿ ಡಾ.ಶರಣಪ್ಪ, ರಾಜಗೋಪಾಲ್‌ನಗರ ಠಾಣೆಯಲ್ಲಿ ಬೆಂ. ಉತ್ತರವಿಭಾಗದ ಡಿಸಿಪಿ ಧರ್ಮೆಂದರ್ ಕುಮಾರ್‌ಮೀನಾ, ತಲಘಟ್ಟಪುರ ಠಾಣೆಯಲ್ಲಿ ಬೆಂ.ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ,ಬೇಗೂರು ಠಾಣೆಯಲ್ಲಿ ಬೆಂ. ಆಗàಯ ೆ°ವಿಭಾಗದ ಡಿಸಿಪಿ ಜೋಶಿ ಶ್ರೀನಾಥ್‌ಮಹದೇವ್, ವಿದ್ಯಾರಣ್ಯಪುರ ಠಾಣೆಯಲ್ಲಿಬೆಂ. ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಹಾಗೂ ಮಹದೇವಪುರ ಠಾಣೆಯಲ್ಲಿ ಡಿಸಿಪಿದೇವರಾಜ್ ಜನರ ಸಮಸ್ಯೆ ಆಲಿಸಿದರು.