Advertisement

ಕೆ.ಕೆ.ಶೆಟ್ಟಿ ಅವರಿಗೆ ಪ್ರತಿಷ್ಠಿತ ಪೊಳಲಿ ಸಂಸ್ಮರಣ ಪ್ರಶಸ್ತಿ

03:24 PM Feb 27, 2018 | |

ಮುಂಬಯಿ: ಕರಾವಳಿಯ ಈ ವರ್ಷದ ಪ್ರತಿಷ್ಠಿತ  ಪೊಳಲಿ ಶಂಕರ ನಾರಾಯಣ ಸಂಸ್ಮರಣ ಪ್ರಶಸ್ತಿಗೆ ಮುಂಬಯಿಯ ಹಿರಿಯ ಯಕ್ಷಗಾನ ಅರ್ಥಧಾರಿ, ತಾಳಮದ್ದಳೆ ಸಂಘಟಕ ಕೆ.ಕೆ. ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ. 1 ರಂದು ಅಪರಾಹ್ನ ಮಂಗಳೂರು ಸಮೀಪದ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅಧ್ಯಕ್ಷತೆಯಲ್ಲಿ ಜರಗಲಿದೆ. ಖ್ಯಾತ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಇವರು ಅಭಿನಂದನ ಭಾಷಣಗೈಯಲಿದ್ದಾರೆ. ಪೊಳಲಿ ಪ್ರಶಸ್ತಿಗೆ ಈ ಹಿಂದೆ ಮುಂಬಯಿಯ ಹಿರಿಯ ಯಕ್ಷಗಾನ ಅರ್ಥಧಾರಿ  ಅಡ್ವೆ ವಾಸು ಶೆಟ್ಟಿ ಇವರು ಪಾತ್ರರಾಗಿದ್ದು, ಇದೀಗ ಹಲವು ವರ್ಷಗಳ ಆನಂತರ ಕೆ. ಕೆ. ಶೆಟ್ಟಿ ಅವರನ್ನು ಈ ಪ್ರಶಸ್ತಿಯು ಅರಸಿಕೊಂಡು ಬಂದಿರುವುದು ಹೆಮ್ಮಯ ವಿಷಯವಾಗಿದೆ.

Advertisement

ಕೆ. ಕೆ. ಶೆಟ್ಟಿ 
ಕೆ. ಕೆ. ಶೆಟ್ಟಿ ಇವರು ಮೂಲತಃ ಉಡುಪಿಯ ಪಡುಬಿದ್ರೆ ಸಮೀಪದ ನಡಾÕಲ್‌ನವರು. ತಂದೆ ಕಾಡ್ಯ ಶೆಟ್ಟಿ ಮತ್ತು ತಾಯಿ ಚಿಕ್ಕಿ ಶೆಟ್ಟಿ. ಎಲ್ಲರಂತೆ ಜೀವನದ ದಾರಿಯನ್ನು ಹುಡುಕುವುದಕ್ಕಾಗಿ ಅವರಾಲ್‌ ಮಟ್ಟಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, 1950 ರಲ್ಲಿ ಮುಂಬಯಿಗೆ ಆಗಮಿಸಿದರು. ಹಗಲಿನಲ್ಲಿ ದುಡಿಯುತ್ತಾ ರಾತ್ರಿ ಮೊಗವೀರ ರಾತ್ರಿಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಿ ಹೈಸ್ಕೂಲ್‌ ಶಿಕ್ಷಣವನ್ನು ಮುಗಿಸಿದರು. ಸುಮಾರು 35 ವರ್ಷಗಳ ಕಾಲ ಹೆಸರಾಂತ ಎಂಜಿನೀಯರಿಂಗ್‌ ಕಂಪೆನಿಯಲ್ಲಿ ದುಡಿದು ಮುಂದೆ ತನ್ನದೇ ಆದ ಜಾಫ್ರೀಜ್‌ ಕೂಲಿಂಗ್‌ ಸಿಸ್ಟಂ ಎಂಬ ಕಂಪೆನಿಯನ್ನು ತೆರೆದು ಇಂದಿಗೂ ಓರ್ವ ಉದ್ಯೋಗಪತಿ ಎಂದು ಗುರುತಿಸಿಕೊಂಡಿದ್ದಾರೆ.

ತಾಳಮದ್ದಳೆ ಕೂಟಗಳಲ್ಲಿ ಆಸಕ್ತಿಯಿದ್ದ ಶ್ರೀಯರು ಶ್ರೀ ಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ರೀರೋಡ್‌ ಮತ್ತು ಶ್ರೀ ಶಾರದಾ ಯಕ್ಷಗಾನ ಮಂಡಳಿ ಬೈಕಲಾ ಇಲ್ಲಿ ಸೇರಿ ಮಾಣಿಯೂರು ಶಂಕರ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಓರ್ವ ಯಕ್ಷಗಾನ   ಅರ್ಥದಾರಿಯಾಗಿ ರೂಪುಗೊಂಡರು. ಲೋಕದ ಪಾಠಶಾಲೆಯಲ್ಲಿ, ಕಲಾಕ್ಷೇತ್ರದಲ್ಲಿ, ಪಂಡಿತವರ್ಗದಲ್ಲಿ ನಿರಂತರ ಅಧ್ಯಯನಶೀಲತೆಯಿಂದ ಜ್ಞಾನ ಸಂಪತ್ತನ್ನು ವೃದ್ಧಿಸುತ್ತಲೆ ಕರ್ಣ, ವಾಲಿ, ಜರಾಸಂಧ, ಕೌರವ, ಭೀಷ್ಮ, ಪರಶುರಾಮ, ಕೃಷ್ಣ ಅರ್ಜುನ, ರಾವಣ ಮೊದಲಾದ ಮಹತ್ವದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಯಶಸ್ಸನ್ನು   ಕಂಡವರು.

ಊರಿನ ಸುಪ್ರಸಿದ್ಧ ಅರ್ಥದಾರಿಗಳೊಡನೆ ಅರ್ಥ ಹೇಳಿದ ಹಿರಿಮೆ ಇವರದ್ದಾಗಿದೆ. ಮುಂಬಯಿಯ ಬ್ರಹ್ಮಾವರ ರಘುರಾಮ ಶೆಟ್ಟಿ, ಅಡ್ವೆ ವಾಸು ಶೆಟ್ಟಿ, ಮಾಣಿಯೂರು ಶಂಕರ ಶೆಟ್ಟಿ, ಕೋಜಕೊಳಿ ಸದಾಶಿವ ಶೆಟ್ಟಿ ಮೊದಲಾದ ಅರ್ಥದಾರಿಗಳಲ್ಲದೆ, ಶೇಣಿ ಶ್ಯಾಮ್‌ರಾವ್‌, ಚಿಕ್ಕಯ್ಯ ಶೆಟ್ಟಿ, ಕೊಲ್ಯಾರು ರಾಜು ಶೆಟ್ಟಿ, ಪ್ರಕಾಶ್‌ ಪಣಿಯೂರು, ಇರುವೈಲು ದಾಮೋದರ ಶೆಟ್ಟಿ, ಶ್ರೀನಿವಾಸ ಪೈ, ವಾಸುದೇವ ಮಾರ್ನಾಡ್‌, ಜಿ. ಟಿ. ಆಚಾರ್ಯ ಮೊದಲಾದ ಹಿರಿ-ಕಿರಿಯ ಕಲಾವಿದರ ಜೊತೆಯಲ್ಲಿ ಅರ್ಥದಾರಿಯಾಗಿ ಭಾಗವಹಿಸುತ್ತಿದ್ದಾರೆ.

ಯಕ್ಷಮಿತ್ರ ಮುಂಬಯಿ ಇದರ ರೂವಾರಿಯಾಗಿ ಮುಂಬಯಿಯಲ್ಲಿ ಪೆರ್ಣಂಕಿಲ ಹರಿದಾಸ್‌ ಭಟ್‌, ಭಾಗವತ ಪೊಲ್ಯ ಲಕ್ಷಿ¾àನಾರಾಯಣ ಶೆಟ್ಟಿ ಮುಂತಾದವರ ಸಹಕಾರದಿಂದ ಸುಮಾರು ಐವತ್ತಕ್ಕೂ ಹೆಚ್ಚು ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಹಲವಾರು ಕಲಾವಿದರ ಸಂಸ್ಮರಣೆಯನ್ನು  ಮಾಡುತ್ತಿದ್ದಾರೆ. ಕೊಡುಗೈದಾನಿಯಾಗಿರುವ ಇವರು ಕಲಾವಿದರ ಅಪತ್ಕಾಲದಲ್ಲಿ ಸದಾ ಸ್ಪಂದಿಸುತ್ತಿದ್ದಾರೆ. ಪ್ರಸ್ತುತ ಅವರಿಗೆ ಪ್ರತಿಷ್ಠಿತ ಪೊಳಲಿ ಶಂಕರನಾರಾಯಣ ಶಾಸ್ತಿÅ ಸಂಸ್ಮರಣ ಪ್ರಶಸ್ತಿ ಲಭಿಸುತ್ತಿರುವುದು ಮುಂಬಯಿ ಯಕ್ಷರಂಗಕ್ಕೆ ಸಂದ ಗೌರವವಾಗಿದೆ.

Advertisement

ಲೇಖಕ: ಜಿ.ಟಿ. ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next