Advertisement

ಹೊರರಾಜ್ಯದವರನ್ನು ಸ್ವಸ್ಥಳಕ್ಕೆ ಕಳುಹಿಸಲು ಸಿದ್ಧತೆ

02:52 PM May 02, 2020 | Suhan S |

ಧಾರವಾಡ: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಸಿಲುಕಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ತೆರಳಲು ಬಯಸುವವರ ನೋಂದಣಿ ಕಾರ್ಯ ಆರಂಭಿಸಲಾಗಿದೆ. ಹತ್ತಿರದ ಗ್ರಾಪಂ, ತಹಶೀಲ್ದಾರ್‌ ಕಚೇರಿ, ಪೊಲೀಸ್‌ ಠಾಣೆ, ಮಹಾನಗರ ಪಾಲಿಕೆ ವಲಯ ಕಚೇರಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖುದ್ದಾಗಿ ಅಥವಾ ಸಹಾಯವಾಣಿ, ವಾಟ್ಸ್‌ಆ್ಯಪ್‌ ಸಂಖ್ಯೆಗಳ ಮೂಲಕ ಕೂಡಲೇ ತಮ್ಮ ಹೆಸರು, ವಿವರ ನೋಂದಾಯಿಸಿಕೊಳ್ಳಬೇಕು.

ಸಹಾಯವಾಣಿ 1077 ಅಥವಾ ವಾಟ್ಸ್‌ ಆ್ಯಪ್‌ ಸಂಖ್ಯೆಗಳಾದ ಮೊ: 9449847646 / 9449847641 ಮೂಲಕ ಯಾವ ರಾಜ್ಯಕ್ಕೆ ಹೋಗಬೇಕು ಎಂಬ ಮಾಹಿತಿ ನೋಂದಣಿ ಮಾಡಿಕೊಳ್ಳಬಹುದು. ಹೊರ ರಾಜ್ಯಗಳಿಗೆ ತೆರಳ ಬಯಸುವವರಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿದೆ. ಇದಕ್ಕೆ ತಗಲುವ ವೆಚ್ಚವನ್ನು ಆಯಾ ಪ್ರಯಾಣಿಕರೇ ಭರಿಸಬೇಕು. ಕಡಿಮೆ ಸಂಖ್ಯೆ ಪ್ರಯಾಣಿಕರು ಇದ್ದರೆ ಪ್ರತ್ಯೇಕ ಕಾರು, ಮಿನಿ ವಾಹನಗಳ ಮೂಲಕ ಹೋಗಲು ಅನುಮತಿ ನೀಡಲಾಗುವುದು.

ಸರ್ಕಾರದ ಮಾರ್ಗಸೂಚಿಗಳು ಬಂದ ಕೂಡಲೇ ಹೊರ ರಾಜ್ಯದ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲಾಗುವುದು. ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಹೊರ ರಾಜ್ಯಗಳ ಜನರು ತಮ್ಮ ಮಾಹಿತಿ ನಿಇಡಿ ನೋಂದಣಿ ಮಾಡಿಕೊಂಡರೆ, ಸಂಬಂಧಿಸಿದ ರಾಜ್ಯಗಳಿಗೆ ಈ ಕುರಿತು ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಡಿಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

1,200 ಕಾರ್ಮಿಕರು ತವರಿಗೆ : ಧಾರವಾಡ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‌ ಆಗಿದ್ದ ಅನ್ಯಜಿಲ್ಲೆಗಳ ಸುಮಾರು 1200 ಇಟ್ಟಿಗೆ ಭಟ್ಟಿಗಳ ವಲಸೆ ಕಾರ್ಮಿಕರನ್ನು ತಮ್ಮ ಜಿಲ್ಲೆಗಳಿಗೆ ಶುಕ್ರವಾರ ಕಳುಹಿಸಿಕೊಡಲಾಯಿತು. ಸರ್ಕಾರ ವೆಚ್ಚ ಭರಿಸಲಿದ್ದು, ನಗರದ ಕೆಸಿಡಿ ವೃತ್ತದಿಂದ ರಾತ್ರಿ 70 ಬಸ್‌ಗಳ ಮೂಲಕ ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತಿತರ ಜಿಲ್ಲೆಗಳ ಕಾರ್ಮಿಕರು ಪ್ರಯಾಣ ಬೆಳೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next