Advertisement
ಅದರ ಭಾಗವಾಗಿ ಮನೆಮಟ್ಟದ ಎಳೆ ಮಕ್ಕಳ ಆರೈಕೆ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ಹುಟ್ಟಿದ ಮಗುವಿನಿಂದ 15 ತಿಂಗಳ ವರೆಗಿನ ಮಕ್ಕಳ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ- ದೈಹಿಕ ಆರೋಗ್ಯದ ಬೆಳವಣಿಗೆ ಕುರಿತ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಆರೋಗ್ಯ ಕಾರ್ಯಕರ್ತೆಯರು ಈ ಹಿಂದೆ “ಮನೆ ಮಟ್ಟದ ನವಜಾತ ಶಿಶು ಆರೈಕೆ ಯೋಜನೆಯಡಿ’ ನವಜಾತ ಶಿಶುವಿಗೆ 45 ದಿನ ಆಗುವವರೆಗೆ 15 ದಿನಗಳಿಗೊಮ್ಮೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ಅವಧಿಯನ್ನು 15 ತಿಂಗಳ ವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ಮಗುವಿಗೆ 3, 6, 9, 12 ಹಾಗೂ 15 ತಿಂಗಳು ಪೂರ್ಣಗೊಳ್ಳುವ ಸಮಯದಲ್ಲಿ ಭೇಟಿ ನೀಡಿ ಆರೋಗ್ಯ ಪರಿಶೀಲನೆ ಮಾಡಲಿದ್ದಾರೆ. ಪ್ರಯೋಜನವೇನು?
ಭೇಟಿಯ ಸಂದರ್ಭ ಮಗುವಿನ ಸಮಗ್ರ ಬೆಳವಣಿಯ ಮಾಹಿತಿಯನ್ನು ಕಾರ್ಯಕರ್ತೆಯರು ಸಂಗ್ರಹಿಸಲಿದ್ದಾರೆ. ಹಾಲೂಡಿಸುವಾಗ ಮಗುವಿನ ತೂಕ ಹಾಗೂ ಶಿಶು ಆರೈಕೆ ಬಗ್ಗೆ ತಾಯಿಗೆ ಮಾಹಿತಿ ನೀಡಲಿದ್ದಾರೆ. ಎರಡನೇ ಭೇಟಿ ಅಂದರೆ ಮಗುವಿಗೆ 3, 6, 9 ಸೇರಿದಂತೆ 15 ತಿಂಗಳು ಪ್ರಾರಂಭವಾಗುವಾಗ ಮಗುವಿಗೆ ಯಾವ ಆಹಾರ ನೀಡಬೇಕು ಎಂಬ ಮಾಹಿತಿ ನೀಡುವುದಲ್ಲದೆ ದೈಹಿಕ ಬೆಳವಣಿಗೆ, ಸೇರಿದಂತೆ ವಿವಿಧ ಹಂತ ಸಮಗ್ರವಾಗಿ ಪರಿಶೀಲನೆ ನಡೆಸಲಿದ್ದಾರೆ. ಭೇಟಿಯ ವೇಳೆ ಮಗುವಿನ ಸಂವೇದನಾ ದೌರ್ಬಲ್ಯದ ಜತೆಗೆ ದೃಷ್ಟಿ ಮತ್ತು ಶ್ರವಣ ದೋಷಗಳು, ಇತರ ಮಕ್ಕಳಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದರ ಜತೆಗೆ ವೈದ್ಯರನ್ನು ಸಂಪರ್ಕಿಸಲು ಪೋಷಕರಿಗೆ ಮಾಹಿತಿ ನೀಡಲಿದ್ದಾರೆ.
Related Articles
Advertisement