Advertisement
ಚರಂಡಿಗೆ ಕೆಲವೆಡೆ ಸ್ಲ್ಯಾಬ್ ಹಾಕದೇ ತೆರೆದೇ ಇದ್ದ ಕಾರಣ, ಇದು ಸಮಸ್ಯೆಗೆ ಕಾರಣವಾಗಿತ್ತು. ಇದರಲ್ಲಿ ಹೂಳು ಜತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಲು ಕಾರಣವಾಗಿತ್ತು. ರಸ್ತೆ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ ಸಮಯದಲ್ಲಿ ತೆರೆದಿದ್ದ ಚರಂಡಿಯ ಹೂಳನ್ನು ಕೆಲವೆಡೆ ಅರ್ಧದಷ್ಟು ಲೋಕೋಪಯೋಗಿ ಇಲಾಖೆಯಿಂದ ತೆಗೆಯಲಾಗಿತ್ತು.
ಮಳೆಯ ನೀರು ಹರಿದು ಹೋಗದೇ, ಅದರಲ್ಲಿ ನಿಂತು ಹೋಗಿ. ಚರಂಡಿ ಪ್ರಯೋಜನಕ್ಕೆ ಬಾರದೇ ಕಸ, ತ್ಯಾಜ್ಯ ತುಂಬಿ ಕಸದ ತೊಟ್ಟಿಯಂತೆ ಕಾಣುತ್ತಿತ್ತು. ಮಳೆ ನೀರು ಕೊಳೆತು ನಿಂತು ದುರ್ವಾಸನೆ ಬರುತ್ತಿತ್ತು. ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗಿತ್ತು. ಲೋಕೋಪಯೋಗಿಯ ಇಲಾಖೆಯ ಬದಲಿಗೆ ಬಜಪೆ ಪ.ಪಂ.ನಿಂದ ಕಾರ್ಯ
ಲೋಕೋಪಯೋಗಿ ಇಲಾಖೆಯು ಚರಂಡಿ ಹೂಳು ಜತೆಗೆ ಕೊಳಚೆ ನೀರನ್ನು ಚರಂಡಿಯಿಂದ ತೆಗೆಯ ಬೇಕಿತ್ತು. ಆದರೆ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ನೀಡದೇ ಇರುವುದರಿಂದ ಬಜಪೆ ಪಟ್ಟಣ ಪಂಚಾಯತ್ ಜನರ ಆರೋಗ್ಯ ಸ್ವತ್ಛತೆಯ ಬಗ್ಗೆ ಜಾಗೃತಿ ವಹಿಸಿ, ಕೊಳಚೆ ನೀರನ್ನು ಟ್ಯಾಂಕರ್ ಮೂಲಕ ತೆಗೆಸಿದೆ.