Advertisement
ಅಲ್ಲದೆ, ಪಕ್ಷದ ಅಧ್ಯಕ್ಷ ಸೇರಿ ಏನಾದರೂ ಆಗಬೇಕು ಎಂಬ ಉದ್ದೇಶವೂ ಇಲ್ಲ. ಯಾರು ಏನು ಬೇಕಾದರೂ ಹೇಳಲಿ. ಯಾರಧ್ದೋ ಮುಲಾಜಿಗೆ ಬಿದ್ದು, “ವಕ್ಫ್ ವಿರುದ್ಧ ಹೋರಾಟಕ್ಕೆ ಹೋಗಬೇಡಿ, ಈ ಹೋರಾಟ ನಮ್ಮದಲ್ಲ’ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ.
Related Articles
ರಾಜ್ಯದ ಮಠ-ಮಂದಿರಗಳು ಹಾಗೂ ರೈತರ ಜಮೀನಿನ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿ ಸಿರುವುದಕ್ಕೆ ಸಂಬಂ ಧಿಸಿ ಡಿ. 3 ಇಲ್ಲವೇ 4ರಂದು ದಿಲ್ಲಿಯಲ್ಲಿ ಜಗದಾಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿಗೆ ಮಧ್ಯಾಂತರ ವರದಿ ಸಲ್ಲಿಸಲಾಗುವುದು ಎಂದು ಯತ್ನಾಳ್ ತಿಳಿಸಿದರು.
Advertisement
“ಸಿ.ಟಿ. ರವಿ ಅವರನ್ನೇ ಕೇಳಿ’ನಮ್ಮ ಹೋರಾಟ ವಕ್ಫ್ ಬೋರ್ಡ್ನಿಂದ ಅನ್ಯಾಯಕ್ಕೊಳಗಾದ ರೈತರು, ಮಠಾಧೀಶರ ಪರವಾಗಿದೆ. ಇದು ಯಾರ ವಿರುದ್ಧವೂ ಅಲ್ಲ. ಇದನ್ನು ಸಹಿಸದವರು ಏನೇನೋ ಹೇಳುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ರಾತ್ರಿ ಯಾದಗಿರಿಯಲ್ಲಿ ಹೇಳಿದರು. ಪಕ್ಷದ ವೇದಿಕೆಯಿಂದ ಹೋರಾಟ ನಡೆಸಬೇಕು ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ರವಿ ನಿತ್ಯ ನಮ್ಮ ತಂಡದ ಜತೆ ದೂರವಾಣಿ ಮೂಲಕ ಮಾತನಾಡುತ್ತಾರೆ. ನಿಮ್ಮ ಹೋರಾಟ ಸತ್ಯದ ಪರ ಇದೆ ಎಂದು ನಮಗೆ ಹೇಳಿದ್ದರು, ಈಗೇಕೆ ಹೀಗೆ ಮಾತನಾಡಿದ್ದಾರೆ ಎಂದು ಅವರನ್ನೇ ಕೇಳಿ ಎಂದರು.