Advertisement

8 ತಿಂಗಳ ಗರ್ಭಿಣಿಯಾಗಿದ್ದರೂ ಸೇವೆ ಸಲ್ಲಿಸುತ್ತಿರುವ ಸಂತೋಷಿ

11:45 PM Apr 24, 2020 | Sriram |

ಸಾವು ಅಥವಾ ಸೋಂಕಿನ ಭೀತಿಯಿದ್ದರೂ, ಕರ್ತವ್ಯವೇ ಮೇಲು ಎಂದು ಮುಂಚೂಣಿಯಲ್ಲಿದ್ದುಕೊಂಡು ಹೋರಾಡುತ್ತಿರುವ ಆರೋಗ್ಯಸೇವಾ ಕಾರ್ಯಕರ್ತರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋದವರು ಈ ಸಂತೋಷಿ ಮಾಣಿಕ್‌ಪುರಿ. ಛತ್ತೀಸ್‌ಗಡದವರಾದ ಸಂತೋಷಿ ಈಗ 8 ತಿಂಗಳ ಗರ್ಭಿಣಿ.

Advertisement

ಕೋವಿಡ್-19 ಹರಡುವ ಭಯಕ್ಕೆ ಎಲ್ಲರೂ ಮನೆಗಳಲ್ಲಿ ಬಂಧಿಯಾಗಿದ್ದರೂ, ಅದರಲ್ಲೂ ಗರ್ಭಿಣಿಯರು ವಿಶೇಷ ಎಚ್ಚರಿಕೆ ವಹಿಸಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಸಂತೋಷಿ ಮಾತ್ರ ಕರ್ತವ್ಯವೇ ದೇವರು ಎಂದು ನಂಬಿಕೊಂಡು ತಮ್ಮ ಕೆಲಸ ಮುಂದುವರಿಸಿದ್ದಾರೆ. ಆರೋಗ್ಯ ಸೇವಾ ಕಾರ್ಯಕರ್ತೆಯಾಗಿರುವ ಸಂತೋಷಿ, ಪ್ರತಿನಿತ್ಯವೂ ಆಸ್ಪತ್ರೆಗೆ ಬಂದು ರೋಗಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಜನರ ಸೇವೆ ಮಾಡುವುದೇ ನನಗೆ ಸಂತೋಷದ ವಿಷಯ. ಇಂಥ ಸಂಕಷ್ಟದ ಸಂದರ್ಭದಲ್ಲಿ ದೇಶದ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಪತಿ ಹಾಗೂ ಕುಟುಂಬದ ಎಲ್ಲ ಸದಸ್ಯರ ಬೆಂಬಲವೂ ನನಗಿದೆ. ಅದು ನನಗೆ ಸ್ಫೂರ್ತಿಯೂ ಆಗಿದೆ ಎಂದಿದ್ದಾರೆ ಸಂತೋಷಿ. ಅವರ ಬದ್ಧತೆಗೆ ಎಲ್ಲರೂ ಶಹಬ್ಟಾಸ್‌ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next