Advertisement

ಮೂರು ಭಾಷೆಗಳಲ್ಲಿ “ಪ್ರೀತಿ ಇರಬಾರದೇ’

06:48 AM Jun 12, 2019 | Lakshmi GovindaRaj |

ಡಾ. ಲಿಂಗೇಶ್ವರ್‌ ನಿರ್ಮಿಸುತ್ತಿರುವ “ಪ್ರೀತಿ ಇರಬಾರದೇ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು, ಮೈಸೂರು, ಹೈದರಾಬಾದ್‌, ರಾಜಮಂಡ್ರಿ, ಊಟಿ ಮುಂತಾದ ಕಡೆ 45ದಿನಗಳ ಚಿತ್ರೀಕರಣ ನಡೆದಿದೆ.

Advertisement

ಕಾಲೇಜ್‌ ಲವ್‌ ಸ್ಟೋರಿ ಹಾಗೂ ತಂದೆ – ಮಗಳ ಭಾಂದವ್ಯ ಸಾರುವ ಕಥಾ ಸಾರಾಂಶ ಈ ಚಿತ್ರದಲ್ಲಿದೆ. ನಿರ್ಮಾಪಕ ಡಾ. ಲಿಂಗೇಶ್ವರ್‌ ಅವರು ಬರೆದಿರುವ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ನವೀನ್‌. ಆರು ಹಾಡುಗಳಿರುವ ಈ ಚಿತ್ರಕ್ಕೆ ವರ್ಗಿಸ್‌ ಸಂಗೀತ ನೀಡುತ್ತಿದ್ದಾರೆ.

ಶ್ರೀವೀನು ವಿನುಕೋಟ ಛಾಯಾಗ್ರಹಣ, ಜಾನಕೀರಾಂ ಸಂಕಲನ, ನರೇಶ್‌ ಆನಂದ್‌ ನೃತ್ಯ ನಿರ್ದೇಶನ ಹಾಗೂ ರಾಮ ಸುಂಕರ ಅವರ ಸಾಹಸ ನಿರ್ದೇಶನವಿದೆ. ‌ರುಣ್‌ತೇಜ್‌, ಲಾವಣ್ಯ, ಕೇದರ್‌ ಶಂಕರ್‌, ಸತ್ಯಕೃಷ್ಣ, ಅಜೇಯ್‌ ಘೋಶ್‌, ಸೀನಿಯರ್‌ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next