Advertisement

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

12:17 AM Jan 03, 2025 | Team Udayavani |

ಹೊಸದಿಲ್ಲಿ: “ಲವ್‌ ಜೆಹಾದ್‌’ ಪ್ರಕರಣಕ್ಕೆ ಸಂಬಂಧಿಸಿ ಬರೇಲಿ ಕೋರ್ಟ್‌ ತನ್ನ ತೀರ್ಪಿನಲ್ಲಿ ಮುಸ್ಲಿಂ ಸಮುದಾಯದ ಕುರಿತು ಉಲ್ಲೇಖಿಸಿದ್ದ ಅವಲೋಕನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರನನ್ನು ಸುಪ್ರೀಂ ಕೋಟ್‌ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅರ್ಜಿದಾರನಿಗೂ ಈ ಕೇಸಿಗೂ ಸಂಬಂಧ ಏನು ಎಂದು ನ್ಯಾಯಪೀಠ ಪ್ರಶ್ನಿಸಿದ್ದಲ್ಲದೆ, ಸಾಕ್ಷ್ಯಗಳ ಆಧಾರದ ಮೇಲೆ ನೀಡಿದ ಅಭಿಪ್ರಾಯವನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿಯನ್ನು ನೀವೇ ಹಿಂಪಡೆಯುತ್ತೀರಾ ಅಥವಾ ವಜಾಗೊಳಿಸಬೇಕಾ ಎಂದೂ ಪ್ರಶ್ನಿಸಿದೆ.

Advertisement

2024ರಲ್ಲಿ, ಬರೇಲಿಯ ಕೋರ್ಟ್‌ ಅರ್ಜಿಯೊಂದರ ವಿಚಾರಣೆ ವೇಳೆ,  “ಲವ್‌ ಜೆಹಾದ್‌’ ಅಕ್ರಮಗಳನ್ನು ಕೆಲ ಉಗ್ರರು ನಡೆಸುತ್ತಾರೆ. ಹಾಗಾಗಿ ಈ ಕ್ರಿಯೆ ಇಡೀ ಮುಸ್ಲಿಂ ಸಮುದಾಯವನ್ನು ಪ್ರತಿಬಿಂಬಿಸಲ್ಲ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next