Advertisement
ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಶಿಬರೂರು ಅವರ ತೋಟದಲ್ಲಿ ಸಂಜೆ ವೇಳೆ ಮೂರು ಕಾಡಾನೆಗಳು ಕಂಡುಬಂದಿವೆ. ಕೆಲವು ದಿನಗಳ ಹಿಂದೆ ಈ ಭಾಗದ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿತ್ತು.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಪ್ರದೇಶದಲ್ಲಿ ಕಾಡಾನೆಯೊಂದು ಗುರುವಾರ ಹಾಡಹಗಲೇ ಸಂಚರಿಸಿ ಆತಂಕ ಮೂಡಿಸಿದೆ. ನಡುಗಲ್ಲಿನ ಕಲ್ಲಾಜೆ ಭಾಗದಿಂದ ಹೊಳೆಗೆ ಇಳಿದು ಮರಕತ ದೇವಸ್ಥಾನದ ಮುಂಭಾಗದ ರಸ್ತೆಯ ಮೂಲಕ ಯೇನೆಕಲ್ಲು ಗ್ರಾಮದ ಅರಂಪಾಡಿ ಭಾಗದಲ್ಲಿ ಸಂಚರಿಸಿದೆ. ರಾತ್ರಿ ವೇಳೆ ಅದು ಯೇನೆಕಲ್ಲು ಶಾಲಾ ಮೈದಾನದಲ್ಲಿ ಸಾಗುತ್ತಿರುವುದನ್ನು ಸ್ಥಳೀಯರು ಗಮನಿಸಿ ವೀಡಿಯೋ ಸೆರೆ ಹಿಡಿದಿದ್ದಾರೆ. ಬಳಿಕ ಕಾಡಾನೆ ಅರಣ್ಯದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆ ಯಾವುದೇ ಹಾನಿ ಮಾಡಿಲ್ಲ. ಹೊಳೆಯಿಂದ ಮೇಲೆ ರಸ್ತೆಗೆ ಬಂದು ರಸ್ತೆಯಲ್ಲೇ ಸಂಚರಿಸಿದೆ.